ಶಾಲೆ ಬಾಲಕ ಸಾವು

Accicent
Published on

ಸಾವಳಗಿ: ಗ್ರಾಮದ ಜಾಧವ ತೋಟದ ಶಾಲೆಗೆ ಬುಧವಾರ ಬೆಳಗ್ಗೆ ತೆರಳುತ್ತಿದ್ದ 6ನೇ ತರಗತಿ ವಿದ್ಯಾರ್ಥಿಗೆ ಅಪರಿಚಿತ ಬೈಕ್ ಡಿಕ್ಕಿಯಾಗಿ ವಿದ್ಯಾರ್ಥಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ವಿನೋದ ರಾಮು ಶಿಂಧೆ ಮೃತ ವಿದ್ಯಾರ್ಥಿ. ವಿದ್ಯಾಗಮ ತರಗತಿ ಹಿನ್ನೆಲೆಯಲ್ಲಿ ಶಾಲೆಗೆ ಬರುವಾಗ ಅಪಘಾತ ಸಂಭವಿಸಿದೆ. ಪರಾರಿಯಾದ ಬೈಕ್ ಸವಾರ ಯಾರೆಂಬುದು ಇನ್ನೂ ಗೊತ್ತಾಗಿಲ್ಲ. ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net