ಸವದಿ ಬಿಜೆಪಿಗೆ ಬರಲು ಬಿಡಲ್ಲ

23ATHANI1
Published on

ಅಥಣಿ: ನಾವು ಯಾವುದೋ ಕಾರಣಕ್ಕೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗ ಶಾಸಕ ಲಕ್ಷ್ಮಣ ಸವದಿಗೆ ಹೆಚ್ಚಿನ ಲಾಭವಾಗಿದೆ. ಸವದಿ ಎನ್ನುವ ಬಿಜೆಪಿ ಪೀಡಾ ಈಗ ಕಾಂಗ್ರೆಸ್ ಪಾಲಾಗಿದೆ. ಬಿಜೆಪಿಯಲ್ಲಿದಿದ್ದರೆ ರಾಜ್ಯದಲ್ಲಿ ಅತಿ ದೊಡ್ಡ ಲೀಡರ್ ಆಗುತ್ತಿದ್ದರು. ಮುಂದೆ ಬಿಜೆಪಿಗೆ ಬರಲಿಕ್ಕೆ ಅವಕಾಶ ಕೊಡುವುದಿಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಪಟ್ಟಣದ ಶಿವಣಗಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಕೃಷ್ಣಾ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆ ಹಿನ್ನೆಲೆ ಸ್ವಾಭಿಮಾನಿ ರೈತರ ಪೆನಲ್ ಚುನಾವಣಾ ಕಾರ್ಯರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್‌ನಲ್ಲಿ ಸವದಿ ಅವರು ಶಾಸಕರಾಗಿ ಕೆಲಸ ಮಾಡಬಹುದು. ಬಿಜೆಪಿ ಬಿಟ್ಟು ವ್ಯಕ್ತಿತ್ವ ಹಾಳು ಮಾಡಿಕೊಂಡಿದ್ದು, ಬಿಜೆಪಿಗೆ ಒಳ್ಳೆಯದಾಯ್ತು ಎಂದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಗುವುದಕ್ಕೆ ಆಸೆಯಿಲ್ಲ ಎನ್ನುವ ಸವದಿ, ಅವಕಾಶ ಸಿಕ್ಕರೆ ಗ್ರಾಪಂ ಅಧ್ಯಕ್ಷನಾಗೋಕೂ ಹಿಂದೆ ಸರಿಯಲ್ಲ. ಬಿಡಿಸಿಸಿ ಅಧ್ಯಕ್ಷ ಸ್ಥಾನ ಪಡೆಯಲು ಶ್ರಮಿಸಿದ್ದಾರೆ. ಈಗ ಕೃಷ್ಣ ಸಹಕಾರಿ ಕಾರ್ಖಾನೆ ಮುಳುಗುವ ಹಂತಕ್ಕೆ ಬಂದಿದ್ದು, ಇಲ್ಲಿನ ಶಾಸಕರು ಹೇಳುವ ಮಾತು ಎಲ್ಲವೂ ಸುಳ್ಳು. ಕೃಷ್ಣಾ ಶುಗರ್ಸ್ ಉಳಿಸಿಕೊಳ್ಳಬೇಕಾದರೆ ರೈತರು ಸ್ವಾಭಿಮಾನಿ ರೈತ ಪೆನಲ್ ಆಯ್ಕೆ ಮಾಡುವಂತೆ ಮನವಿ ಮಾಡಿದರು.

ಮಾಜಿ ಶಾಸಕ ಮಹೇಶ ಕುಮಠಳ್ಳಿ, ಮುಖಂಡ ಗಜಾನನ ಮಂಗಸೂಳಿ ಮಾತನಾಡಿದರು. ಮಾಜಿ ಶಾಸಕರಾದ ಶ್ರೀಮಂತ ಪಾಟೀಲ, ಶಹಜಾನ್ ಡೊಂಗರಗಾಂವ, ಶಶಿಕಾಂತ ಗುರೂಜಿ, ಬಿಜೆಪಿ ತಾಲೂಕಾಧ್ಯಕ್ಷ ಗಿರೀಶ ಬುಟಾಳೆ, ಅಪ್ಪಾಸಾಬ ಅವತಾಡೆ, ಎ.ಎ. ಹುದ್ದಾರ, ಸಂಪತಕುಮಾರ ಶೆಟ್ಟಿ, ರಮೇಶ ಸಿಂದಗಿ, ರಾವಸಾಬ ಐಹೊಳೆ, ನಿಂಗಪ್ಪ ನಂದೇಶ್ವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net