

ರೋಣ: ತಾಲೂಕಿನ ಸವಡಿ ಗ್ರಾಮದ ಆರಾಧ್ಯ ದೈವ ಸಂಗಮೇಶ್ವರ ನೂತನ ರಥ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ಏ. 12ರಿಂದ 24ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಏ.12ರಂದು ಸಂಜೆ 7 ಗಂಟೆಗೆ ನಂದಿ ಧ್ವಜಾರೋಹಣ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಏ.13ರಿಂದ 20 ವರೆಗೆ ಮಣಕವಾಡದ ಮೃತ್ಯುಂಜಯ ಸ್ವಾಮಿಗಳಿಂದ ಪ್ರವಚನ ಜರುಗಲಿದೆ. 14ರಂದು ರಥದ ಪ್ರಾಣ ಪ್ರತಿಷ್ಠಾಪನೆ, ಲೋಕಾರ್ಪಣೆ ಹಾಗೂ ರುದ್ರಾಭಿಷೇಕ ನವಗ್ರಹ ಹಿರೇಮಠ ಬಾದಾಮಿಯ ಶಿವಪೂಜಾ ಶಿವದೇವರ ನೇತೃತ್ವದಲ್ಲಿ ಜರುಲಿದೆ. 16ರಿಂದ 20ರವರೆಗೆ ಬೆಳಗ್ಗೆ 6 ಗಂಟೆಗೆ ಸವಡಿ ಮತ್ತು ನೆರೆಯ ಗ್ರಾಮಗಳಲ್ಲಿ ಮೃತ್ಯುಂಜಯ ಸ್ವಾಮಿಗಳಿಂದ ಸದ್ಭಾವನಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. 17 ರಂದು ರಾಶಿ ಕಾರ್ಯಕ್ರಮ, 19ರಂದು ಮುಂಜಾನೆ 10 ಗಂಟೆಗೆ ಕಳಸಾರೋಹಣ, 20ರಂದು ನೀಲಮ್ಮ ತಾಯಿ ಅಸುಂಡಿ ಅವರಿಂದ ಪ್ರವಚನ, 21ರಂದು ಬೆಳಗ್ಗೆ 6 ಗಂಟೆಗೆ ಅಯ್ಯಚಾರ, ಲಿಂಗದೀಕ್ಷೆ, ಕುಂಭಮೇಳ ಹಾಗೂ ಸಂಗಮೇಶ್ವರನಿಗೆ ಮಹಾರುದ್ರಾಭಿಷೇಕ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಾಯಂಕಾಲ 5 ಗಂಟೆಗೆ ಮಹಾರಥೋತ್ಸವ ಹಾಗೂ 6 ಗಂಟೆಗೆ ಧರ್ಮಸಭೆ ಜರುಗುವುದು. 22ರಂದು ರಾತ್ರಿ 9 ಗಂಟೆಗೆ ಪರಸಿ ಉತ್ಸವ ಮತ್ತು ಗೀಗಿ ಪದಗಳ ಕಾರ್ಯಕ್ರಮ ನಡೆಯಲಿದೆ ಎಂದು ಸಂಗಮೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ತಿಳಿಸಿದೆ.
ಜಂಗಿ ಕುಸ್ತಿ ಆಯೋಜನೆ
ಏಪ್ರಿಲ್ 21ರಂದು ದನಗಳ ಜಾತ್ರೆ ಹಾಗೂ 22ರಿಂದ 24ರವರೆಗೆ ಸವಡಿ ಸಂಗಮೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ನಾಡಿನ ಪ್ರಸಿದ್ದ ಪೈಲ್ವಾನರ ಜಂಗಿ ಕುಸ್ತಿ ಏರ್ಪಡಿಸಲಾಗಿದೆ.