

ಅಥಣಿ ಗ್ರಾಮೀಣ: ಮಾಜಿ ಶಾಸಕ ಮಹೇಶ ಕುಮಠಳ್ಳಿ ಅವರ ಸಹೋದರ ಹಾಗೂ ಬೆಂಬಲಿಗರು ಶಾಸಕ ಲಕ್ಷ್ಮಣ ಸವದಿ ಅವರ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿರುವುದು ರಾಜಕೀಯ ಪ್ರೇರಿತ ಎಂದು ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೋಘಸಿದ್ಧ ಖೋಬ್ರಿ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ನಿರೀಕ್ಷಣಾ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಮಹೇಶ ಕುಮಠಳ್ಳಿ ಅವರು ಶಾಸಕರಿದ್ದಾಗ ಅಮ್ಮಾಜೇಶ್ವರಿ ಏತ ನೀರಾವರಿ ಕಾಮಗಾರಿ ಪ್ರಾರಂಭಿಸಿಲ್ಲ. ಸ್ವಾರ್ಥ ರಾಜಕೀಯ ಲಾಭಕ್ಕಾಗಿ ರೈತರ ಕನಸಿಗೆ ಮಣ್ಣೆರೆಚಿದ್ದಾರೆ. ಸುಳ್ಳು ಆರೋಪಗಳಿಗೆ ಜನ ಮಾರು ಹೋಗುವುದಿಲ್ಲ.
ಲಕ್ಷ್ಮಣ ಸವದಿ ಶಾಸಕರಾದ ಬಳಿಕ ಕ್ಷೇತ್ರ ಅಭಿವೃದ್ಧಿ ಕಾಣುತ್ತಿದೆ. ಏತ ನೀರಾವರಿ ಯೋಜನೆ ಕಾಮಗಾರಿ ಪ್ರಾರಂಭ, ದ್ರಾಕ್ಷಿ ಬೆಳೆಗೆ ವಿಮೆ, ಪಶುವೈದ್ಯಕೀಯ ಕಾಲೇಜು, ಆರ್‌ಟಿಒ ಕಚೇರಿ, ಕೃಷಿ ಮಹಾವಿದ್ಯಾಲಯ, ಕುಡಿಯುವ ನೀರು, ರಸ್ತೆ, ಶಾಲಾ-ಕಾಲೇಜು ಅಭಿವೃದ್ಧಿ ಮಾಡಿದ್ದಾರೆ ಎಂದರು.
ಕೋವಿಡ್, ಪ್ರವಾಹ ಸಮಯದಲ್ಲಿ ಕ್ಷೇತ್ರದ ಜನರ ಹಿತ ಕಾಪಾಡಿದ್ದಾರೆ. ಸುಳ್ಳು ಆರೋಪಗಳ ಮೂಲಕ ಕ್ಷೇತ್ರದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದಲ್ಲಿ ಅತರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿದರು.
ಮಾಜಿ ತಾಪಂ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ, ಸುರೇಶ ಖೋಳಂಬಿ, ಲಕ್ಕಪ್ಪ ನಾಟೀಕಾರ, ಡಾ.ಬಿ.ಎಸ್.ಕಾಮನ, ಡಾ.ಆರ್.ಡಿ.ಪೂಜಾರಿ, ಗುರುರಾಜ ಕುಂಬಾರ ಇತರರಿದ್ದರು.