ದೇವಸ್ಥಾನದ ಆಲದ ಮರಕ್ಕೆ​ ವಾಹನ ಡಿಕ್ಕಿ, ಸವದತ್ತಿ ಯಲ್ಲಮ್ಮದೇವಿಯ 6 ಭಕ್ತರು ಸಾವು: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಣೆ

accident
Published on

ಬೆಳಗಾವಿ: ಅಪಘಾತದಲ್ಲಿ ಮೃತಪಟ್ಟ ಸವದತ್ತಿ ಯಲ್ಲಮ್ಮನ ಭಕ್ತರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಸವದತ್ತಿ ಯಲ್ಲಮ್ಮನ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಗೂಡ್ಸ್ ವಾಹನ ಬುಧವಾರ ರಾತ್ರಿ ಮಾರ್ಗಮಧ್ಯೆ ಅಪಘಾತಕ್ಕೀಡಾಗಿತ್ತು. ಈ ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ 6 ಭಕ್ತರು ಮೃತಪಟ್ಟಿದ್ದಾರೆ.

ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ ಹನಮವ್ವ ಮ್ಯಾಗಾಡಿ (224), ದೀಪಾ (31), ಸವಿತಾ (12), ಸುಪ್ರೀತಾ (11), ಮಾರುತಿ (42) ಮತ್ತು ಇಂದ್ರವ್ವ (24) ಮೃತ ದುರ್ದೈವಿಗಳು. ಇವರೆಲ್ಲರೂ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆಂದು ಗೂಡ್ಸ್​ ವಾಹನದಲ್ಲಿ ಬುಧವಾರ ರಾತ್ರಿ ಹೊರಟಿದ್ದರು. ರಾಮದುರ್ಗ ತಾಲೂಕಿನ ಚಿಂಚನೂರು ವಿಠ್ಠಲ್ ದೇವಸ್ಥಾನದ ಬಳಿ ಚಾಲಕನ ನಿಯಂತ್ರಣ ತಪ್ಪಿದ ವಾಹನ, ವಿಠ್ಠಲ-ರುಕ್ಮಿಣಿ ದೇವಸ್ಥಾನದ ಆಲದ ಮರಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಗಂಭೀರಗಾಯಗೊಂಡ ಐವರು ಸ್ಥಳದಲ್ಲೇ ಮೃತಪಟ್ಟರು. ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಕಡಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net