ಚಿನ್ನದ ತೊಟ್ಟಿಲಿನಲ್ಲಿ ಕೃಷ್ಣ: ಈಶಪ್ರಿಯ ತೀರ್ಥರಿಂದ ಲಕ್ಷ ತುಳಸಿ ಅರ್ಚನೆ

Srikrishna mutt
Published on

ಉಡುಪಿ: ‘ಚಿನ್ನದ ತೊಟ್ಟಿಲಿನಲ್ಲಿ ಬಾಲಕೃಷ್ಣ’ ಅಲಂಕಾರಗೊಂಡಿದ್ದ ದೇವರಿಗೆ ಗುರುವಾರ ಅದಮಾರು ಪರ್ಯಾಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಲಕ್ಷ ತುಳಸಿ ಅರ್ಚನೆಯೊಂದಿಗೆ ಮಹಾಪೂಜೆ ನೆರವೇರಿಸಿದರು.

ಶ್ರೀಕೃಷ್ಣನ ಜನ್ಮದಿನ ಸೌರ ಶ್ರೀಕೃಷ್ಣ ಜನ್ಮಾಷ್ಟಮಿ ಉಡುಪಿ ಕೃಷ್ಣಮಠದಲ್ಲಿ ಗುರುವಾರ ಕರೊನಾ ಹಿನ್ನೆಲೆಯಲ್ಲಿ ಸರಳವಾಗಿ ಭಕ್ತಿ ಶ್ರದ್ಧೆಯಿಂದ ನೆರವೇರಿತು. ಅಷ್ಟಮಿ ಪ್ರಯುಕ್ತ ವಿಟ್ಲಪಿಂಡಿ ಶ್ರೀಕೃಷ್ಣಲೀಲೋತ್ಸವ ಮೆರವಣಿಗೆ ಶುಕ್ರವಾರ ಮಧ್ಯಾಹ್ನ ಆರಂಭವಾಗಲಿದೆ. ಕೃಷ್ಣನ ಮೃಣ್ಮಯ ಮೂರ್ತಿಯನ್ನು ಸ್ವರ್ಣರಥದಲ್ಲಿಟ್ಟು ಮೆರವಣಿಗೆ ನಡೆಸಲಾಗುತ್ತದೆ.

ಬಳಿಕ ಮೊಸರು ತುಂಬಿದ ಮಡಕೆ ಒಡೆದು ಗೋವಳರು ಸಂಭ್ರಮಿಸಲಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ರಥೋತ್ಸವಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ವಿವಿಧ ಮಠಾಧೀಶರು, ಸಿಬ್ಬಂದಿ ವರ್ಗದವರು ಮಾತ್ರ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net