ಸತ್ಯನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ

Kampli Temple
ಕಂಪ್ಲಿಯ ಸತ್ಯನಾರಾಯಣ ಸ್ವಾಮಿಗೆ ತುಳಸಿ, ಹೂಗಳಿಂದ ಅಲಂಕಾರ ಮಾಡಲಾಗಿತ್ತು.
Published on

ಕಂಪ್ಲಿ: ಇಲ್ಲಿನ ಸತ್ಯನಾರಾಯಣಪೇಟೆಯಲ್ಲಿರುವ ಸತ್ಯನಾರಾಯಣ ದೇವಸ್ಥಾನದ 55ನೇ ವಾರ್ಷಿಕೋತ್ಸವ ನಿಮಿತ್ತ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಸಮೃದ್ಧ ಮಳೆ, ಬೆಳೆ, ಲೋಕಕಲ್ಯಾಣಾರ್ಥ ಸುಜ್ಞಾನೇಂದ್ರಾಚಾರ್, ಜೊಯಿಸ್ ಗುಂಡಾಚಾರ್, ಅನಂತಾಚಾರ್, ವ್ಯಾಸಾಚಾರ್, ಅರ್ಚಕ ಶ್ರೀಕಾಂತ್ ಪೌರೋಹಿತ್ಯದಲ್ಲಿ ಸತ್ಯನಾರಾಯಣಸ್ವಾಮಿಗೆ ಪಂಚಾಮೃತ ಅಭಿಷೇಕ, ಪವಮಾನ ಹೋಮ, ಸತ್ಯನಾರಾಯಣ ವ್ರತ, ಅನ್ನಸಂತರ್ಪಣೆ ಜರುಗಿದವು. ಅಮೃತಶಿಲಾ ಸತ್ಯನಾರಾಯಣಸ್ವಾಮಿ ಪ್ರತಿಮೆಯನ್ನು ಪುಷ್ಪಾ, ತುಳಸಿದಳ ಹಾರಗಳಿಂದ ಸಿಂಗರಿಸಲಾಗಿತ್ತು. ಸತ್ಯನಾರಾಯಣಸ್ವಾಮಿ ದೇವರ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ದೇವಸ್ಥಾನದ ಧರ್ಮಕರ್ತರಾದ ಜಿ.ವಿ.ಸತ್ಯನಾರಾಯಣಬಾಬು, ಜಿ.ಬಿ.ಕೋಟೇಶ್, ಶಾಸಕ ಜೆ.ಎನ್.ಗಣೇಶ್, ಪ್ರಮುಖರಾದ ಡಿ.ವಿ.ಸುಬ್ಬಾರಾವ್, ಡಿ.ವಿ.ಸತ್ಯನಾರಾಯಣ, ಟಿ.ಕೊಟ್ರೇಶ್, ಬಿ.ನಿರಂಜನ ಗುಪ್ತಾ, ಟಿ.ಕೇದಾರೇಶ್ವರ, ಡಿ.ಮೌನೇಶ್, ಬಾಲವೆಂಕಟೇಶ್, ಯಣ್ಣಿ ಚಂದ್ರಮೋಹನ, ವಾಲಿ ಕೊಟ್ರಪ್ಪ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net