

ತಿಪಟೂರು: ರಾಜ್ಯದ ಪ್ರತಿಷ್ಠಿತ ಗಣೇಶ ಉತ್ಸವಗಳಲ್ಲಿ ಒಂದಾದ ತಿಪಟೂರು ಸತ್ಯಗಣಪತಿ ಮಹೋತ್ಸವಕ್ಕೆ ತೆರೆ ಬಿದ್ದಿದ್ದು ವಿನಾಯಕ ಮೂರ್ತಿಯನ್ನು ನಗರದ ಅಮಾನಿಕೆರೆಯಲ್ಲಿರುವ ಕಲ್ಯಾಣಿಯಲ್ಲಿ ಭಾನುವಾರ ಸರಳವಾಗಿ ವಿಸರ್ಜಿಸಲಾಯಿತು.
ಪ್ರತೀ ವರ್ಷ ಹಿಂದಿನ ರಾತ್ರಿ ಪ್ರಾರಂಭವಾಗಿ ಮರುದಿನ ತಡರಾತ್ರಿವರೆಗೂ ನಡೆಯುತ್ತಿದ್ದ ಉತ್ಸವದಲ್ಲಿ ನಾಡಿನ ವಿವಿಧೆಡೆಯ ಕಲಾ ತಂಡಗಳ ಸಾಂಸ್ಕೃತಿಕ ವೈಭವ ಬಿಂಬಿಸುವ ಕೀಲು ಕುದುರೆ, ಕುದುರೆ ಸವಾರಿ, ವೀರಗಾಸೆ, ಡೊಳ್ಳು ಕುಣಿತ, ಕೋಲಾಟ, ವೀರಗಾಸೆ, ಕೇರಳದ ಚಂಡೆವಾಧ್ಯ, ಧರ್ಮಸ್ಥಳ-ಉಜಿರೆಯ ನಾದಸ್ವರ ಪ್ರದರ್ಶನ, ಡಿಜೆ, ಕೇರಳದ ಸಿಡಿಮದ್ದಿನ ಸದ್ದು ಮಾಡುತ್ತಿದ್ದವು, ಆದರೆ ಕರೊನಾದಿಂದಾಗಿ ಈ ಬಾರಿ ಇವೆಲ್ಲವಕ್ಕೂ ನಿರ್ಬಂಧ ಹೇರಲಾಗಿತ್ತು.
ಮೈಸೂರಿನ ದಸರಾ, ಬೆಂಗಳೂರು ಕರಗ ಮಹೋತ್ಸವ ಸರಳ ಆಚರಣೆಗೆ ಸರ್ಕಾರ ಸೂಚಿಸಿದ್ದರಿಂದ ಇಲ್ಲಿಯೂ ಸರಳವಾಗಿ ಸತ್ಯಗಣಪತಿ ವಿಸರ್ಜಿಸಲಾಯಿತು. ವ್ನಿೇಶ್ವರನಿಗೆ ಮಂಗಳಾರತಿ ಮಾಡಿ ಈಡುಗಾಯಿ ಒಡೆಯಲೂ ನಿರ್ಬಂಧ ಹೇರಲಾಗಿತ್ತು. ಸರಳ ಮೆರವಣಿಗೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರು ನಗರದತ್ತ ಸುಳಿಯಲಿಲ್ಲ.
ಸತ್ಯಗಣಪತಿ ಉತ್ಸವ ನಡೆಯುವ ಹಿನ್ನೆಲೆಯಲ್ಲಿ ಬೆಸ್ಕಾಂ ಇಲಾಖೆ ಮೆರವಣಿಗೆ ಸಾಗುವ ಮಾರ್ಗದಲ್ಲಿ ದೇವರ ಹೂವಿನ ದರ್ಬಾರ್‌ಗೆ ವಿದ್ಯುತ್ ತಂತಿಗೆ ತಗುಲದಂತೆ ಮುಂಜಾಗೃತಾ ಕ್ರಮವಾಗಿ ತಂತಿಗಳನ್ನು ಎತ್ತರಿಸಲು ಹಳೇ ಕಂಬಗಳನ್ನು ತೆಗೆದು,11 ಮೀಟರ್ ಎತ್ತರದ ಆರ್‌ಸಿಸಿ ಕಂಬಗಳನ್ನು ಅಳವಡಿಸಿತ್ತು, ಆದರೆ ಮೆರವಣಿಗೆಯ ಕೊನೇ ಗಳಿಗೆಯಲ್ಲಿ ಮಾರ್ಗ ಬದಲಾಯಿಸಿ ಆಸ್ಥಾನ ಮಂಟಪದಿಂದ ಹೊರಟ ಗಣಪ ಕೇವಲ ದೊಡ್ಡಪೇಟೆ ರಸ್ತೆಯ ಮೂಲಕ ಸಾಗಿ ಅಮಾನಿಕೆರೆಯ ಕಲ್ಯಾಣಿ ತಲುಪಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೆಜ್ಜೆ ಹೆಜ್ಜೆಗೂ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಶಾಸಕ ಬಿ.ಸಿ ನಾಗೇಶ್, ಶ್ರೀ ಸತ್ಯಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ.ರವಿಶಂಕರ್, ಅಡಿಷನಲ್ ಎಸ್‌ಪಿ ಉದೇಶ್, ಡಿವೈಎಸ್‌ಪಿ ಎನ್.ಚಂದನ್ ಕುಮಾರ್, ನಗರಸಭೆ ಆಯುಕ್ತ ಉಮಾಕಾಂತ್, ಸಮಾಜ ಸೇವಕ ಕೆ.ಟಿ ಶಾಂತಕುಮಾರ್, ನಗರಸಭೆ ಸದಸ್ಯ ರಾಮ್‌ಮೋಹನ್, ತರಕಾರಿ ಗಂಗಾಧರ್, ಕೋಟೆ ಪ್ರಭು, ಮೋಹನ್ ಕುಮಾರ್ ಇತರರಿದ್ದರು.
ಪೊಲೀಸ್ ಇಲಾಖೆ ಉಸ್ತುವಾರಿ: ಪ್ರತಿವರ್ಷ ಎರಡು ದಿನ ನಡೆಯುತ್ತಿದ್ದ ವಿಸರ್ಜನಾ ಉತ್ಸವ ಈ ಬಾರಿ ಬೆಳಗ್ಗೆ 10ಕ್ಕೆ ಶುರುವಾಗಿ ಮಧ್ಯಾಹ್ನ 3 ಗಂಟೆ ವೇಳೆಗೆ ಪೂರ್ಣಗೊಂಡಿತು. ಟ್ರಸ್ಟ್‌ನಿಂದ ಕೇವಲ 100 ಜನರಿಗೆ ಸೀಮಿತಗೊಳಿಸಿ ಪಾಸ್ ವಿತರಿಸಿ, ಪೊಲೀಸ್ ಇಲಾಖೆಗೆ ಉತ್ಸವದ ಉಸ್ತುವಾರಿಗೆ ಒಪ್ಪಿಸಲಾಗಿತ್ತು, ಇತರರಿಗೆ ನಿರ್ಬಂಧ ಹೇರಿದ್ದರಿಂದ ಜನದಟ್ಟನೆ ವಿರಳವಾಗಿತ್ತು. ಶ್ರೀ ಸತ್ಯಗಣಪತಿ ಹಾಗೂ ಶ್ರೀ ಗೌರಿಗೆ ಆಸ್ಥಾನ ಮಂಟಪದಲ್ಲಿ ಅಂತಿಮ ಪೂಜೆ ಸಲ್ಲಿಸಿ ಉತ್ಸವ ನಡೆಸಲಾಯಿತು.ನಿರ್ಧರಿಸಿದ್ದಾರೆ ಎನ್ನಲಾಗಿದೆ.