ಸತ್ಯ ಪ್ರಮೋದ ಹರಿದಾಸ ಸಾಹಿತ್ಯ ಪ್ರಶಸ್ತಿ ಪ್ರದಾನ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಶ್ರೀ ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರತಿಷ್ಠಾನ, ಉತ್ತರಾದಿಮಠ ದತ್ತಿ ನಿಮಿತ್ತ ಜ. 19ರಂದು ಸಂಜೆ 6 ಗಂಟೆಗೆ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಸತ್ಯ ಪ್ರಮೋದ ಹರಿದಾಸ ಸಾಹಿತ್ಯ ಪ್ರಶಸ್ತಿ-2025 ಪ್ರದಾನ ಸಮಾರಂಭ ಏರ್ಪಡಿಸಿದೆ.

ಅತಿಥಿಗಳಾಗಿ ಹಿರಿಯ ಪತ್ರಕರ್ತ ಮೋಹನ ಹೆಗಡೆ, ಹಿರಿಯ ನ್ಯಾಯವಾದಿ ಶ್ರೀಕಾಂತ ಪಾಟೀಲ ಆಗಮಿಸುವರು. ಎಸ್​ಡಿಎಂ ದಂತ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಕೃತಿಕಾ ಸತ್ಯಬೋಧ ಗುತ್ತಲ ಪ್ರಮಾಣಪತ್ರ ವಿತರಿಸುವರು. ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಅಧ್ಯಕ್ಷತೆ ವಹಿಸುವರು.

ಇದಕ್ಕೂ ಪೂರ್ವದಲ್ಲಿ ಮಧ್ಯಾಹ್ನ 3 ಗಂಟೆಗೆ ಭಜನಾ ಹಾಗೂ ಮಹಿಳಾ ಮಂಡಳಗಳಿಗೆ ಶ್ರೀ ಹರಿದಾಸರು ರಚಿಸಿದ ವಿನಾಯಕ ಹಾಡುಗಳ ಸ್ಪರ್ಧೆಗೆ ಕರ್ನಾಟಕ ಕಾಲೇಜಿನ ಪ್ರಾಂಶುಪಾಲ ಡಾ. ಎಚ್​.ಎ. ಕಟ್ಟಿ ಚಾಲನೆ ನೀಡುವರು. ಅತಿಥಿಗಳಾಗಿ ಆಕಾಶವಾಣಿ ಕಲಾವಿದರಾದ ಡಾ. ಅನೀಲ ಮೇತ್ರಿ, ವಾದಿರಾಜ ನಿಂಬರಗಿ ಆಗಮಿಸುವರು. ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಎಸ್​.ಬಿ. ಗುತ್ತಲ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net