ಕಂಬಳ ಉಳಿಸುವ ಕಾರ್ಯ ಅಭಿನಂದನೀಯ : ದಂತವೈದ್ಯ ಡಾ.ಬಾಲಚಂದ್ರ ಶೆಟ್ಟಿ ಮಿಯ್ಯರು ಅಭಿಮತ

New Project (9)
Published on

ಬಂಟ್ವಾಳ: ತಾಲೂಕಿನ ಉಳಿಗ್ರಾಮದ ಕಕ್ಯಪದವು ಮೈರಾ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ಕಕ್ಯಪದವು ಮೈರ-ಬರ್ಕೆಜಾಲುನಲ್ಲಿ ನಡೆಯುವ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಅದ್ದೂರಿಯ ಚಾಲನೆ ನೀಡಲಾಯಿತು.

ಬಿ.ಸಿ.ರೋಡ್ ದಂತವೈದ್ಯ ಡಾ.ಬಾಲಚಂದ್ರ ಶೆಟ್ಟಿ ಮಿಯ್ಯರು ಸಭಾಧ್ಯಕ್ಷತೆ ವಹಿಸಿ, ತುಳುನಾಡಿನ ಸಂಸ್ಕೃತಿಯ ಪ್ರತೀಕವಾದ ಕಂಬಳ ಉಳಿಸುವ ಕಾರ್ಯ ಅಭಿನಂದನೀಯ ಎಂದರು.

ರಾಘವೇಂದ್ರ ಭಟ್ ಕೊಡಂಬೆಟ್ಟು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಉದ್ಯಮಿಗಳಾದ ವಿಜಯ ವಿ.ಕೋಟ್ಯಾನ್ ಅಲ್ಲಿಪಾದೆ ಮತ್ತು ರೋಹಿತ್ ಪೂಜಾರಿ ಉಡ್ಕುಂಜ ಸತ್ಯ-ಧರ್ಮ ಜೋಡುಕರೆ ಉದ್ಘಾಟಿಸಿದರು. ಪ್ರಗತಿಪರ ಕೃಷಿಕ ಶಿವಪ್ಪ ಪೂಜಾರಿ ಜೇಡರಬೆಟ್ಟು, ಗೆಳೆಯರ ಬಳಗ ಅಧ್ಯಕ್ಷ ದಿನೇಶ್ ಪೂಜಾರಿ ಕುಕ್ಕಾಜೆ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.

ಉಳಿ ಗ್ರಾಪಂ ಉಪಾಧ್ಯಕ್ಷ ವಸಂತ ಸಾಲ್ಯಾನ್ ರಾಮನಗರ, ಕಂಬಳ ಸಮಿತಿ ಅಧ್ಯಕ್ಷ ಸುದರ್ಶನ್ ಬಜ, ಉಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ಚಿದಾನಂದ ರೈ ಕಕ್ಯ, ಪ್ರಮುಖರಾದ ಸಂಜೀವ ಪೂಜಾರಿ ಕಟ್ಟದಡೆ, ರವಿ ಶೆಟ್ಟಿ ಬೋಳ್ಯ, ಲೋಕೇಶ್ ಗೌಡ ಬರ್ಕೆಜಾಲು, ತನಿಯಪ್ಪ ಗೌಡ ಪೆಂರ್ಗಾಲು, ಪಶು ವೈದ್ಯಾಧಿಕಾರಿ ಡಾ.ಬಾಲಕೃಷ್ಣ ಕೆ., ಧರ್ಣಪ್ಪ ಪೂಜಾರಿ, ರವಿ ಶೆಟ್ಟಿ ಕಿಂಜಾಲು, ಚಂದ್ರಶೇಖರ, ದಯಾನಂದ ಮುಂಡ್ರೇಲು, ಕೇಶವ ಪೂಜಾರಿ ಕಂಚಲಪಲ್ಕೆ, ಸುಧಾಕರ ಶೆಟ್ಟಿ ಶಂಕರಬೆಟ್ಟು, ಗಣೇಶ್ ಕೋಂಗುಜೆ, ಕಂಬಳ ಸಮಿತಿ ಕಾರ್ಯಾಧ್ಯಕ್ಷ ಲತೀಶ್ ಕುಕ್ಕಾಜೆ, ಪದಾಧಿಕಾರಿಗಳಾದ ಎನ್.ಧನಂಜಯ ಶೆಟ್ಟಿ ಸರಪಾಡಿ, ಶಾಂತಪ್ಪ ಪೂಜಾರಿ ಹಟದಡ್ಕ, ಸುರೇಶ್ ಮೈರ, ಉಮೇಶ್ ಪೂಜಾರಿ, ಪುರುಷೋತ್ತಮ ಪೂಜಾರಿ ಪಲ್ಕೆ, ರಂಜಿತ್ ಮೈರಾ, ವಸಂತ ಪೂಜಾರಿ ಡೆಚ್ಚಾರು, ಚೇತನ್ ಊರ್ದೊಟ್ಟು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನ್ ಸಿರಿಲ್ ಡಿಸೋಜ, ಉದ್ಘೋಷಕರಾದ ಸತೀಶ್ ಹೊಸ್ಮಾರು, ಪ್ರಕಾಶ್ ಕರ್ಲ ಮೊದಲಾದವರಿದ್ದರು.

ಶಿವಾನಂದ ಮೈರಾ ಪ್ರಸ್ತಾವಿಸಿ, ಸ್ವಾಗತಿಸಿದರು. ಪ್ರಶಾಂತ್ ಮೈರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಉದ್ಘಾಟನೆಗೆ ಮುನ್ನ ಮೈರ ಶ್ರೀ ರಾಮಾಂಜನೇಯ ಭಜನ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆ ಮೂಲಕ ಓಟದ ಕೋಣಗಳನ್ನು ಕರೆತರಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net