ಸಾತನೂರು ರಸ್ತೆ ಗುಂಡಿಮಯ!

road
Published on

ಪ್ರವಾಸಿತಾಣಕ್ಕೆ ಸಂಪರ್ಕಿಸುವ ಮಾರ್ಗದ ದುರಸ್ತಿಗೆ ಜನಾಗ್ರಹ

ಚನ್ನಪಟ್ಟಣ: ನಗರದ ಸಾತನೂರು ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ನಿತ್ಯ ಸಾವಿರಾರು ಮಂದಿ ಸಂಚರಿಸುವ ಪ್ರಮುಖ ರಸ್ತೆಯೇ ಇಂತಹ ಸ್ಥಿತಿಯಲ್ಲಿರುವುದು ವ್ಯವಸ್ಥೆಯ ಅಣಕವಾಗಿದೆ.

ಹೌದು.., ನಗರದ ಸಾತನೂರು ರಸ್ತೆ ವಾಹನ ಸವಾರರಿಗೆ ಅರಶ@ ಸಾವಿನ ರಸ್ತೆಯಾಗಿ ಬದಲಾಗಿದೆ. ಸಾತನೂರು ಸರ್ಕಲ್​ನಿಂದ ಅಂಬೇಡ್ಕರ್​ ನಗರದವರೆಗೂ ರಸ್ತೆಯ ಸ್ಥಿತಿ ಅಯೋಮಯವಾಗಿದೆ. ಈ ರಸ್ತೆಯಲ್ಲಿ ಗುಂಡಿಗಳಿಗೆ ಇಷ್ಟು ವರ್ಷವಾದರೂ ಮುಕ್ತಿ ಇಲ್ಲವೇ? ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರದಿಂದ ಸಾತನೂರು ಹಾಗೂ ಹಲಗೂರು ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತಿವೆ. ರಸ್ತೆಯ ಗುಂಡಿಗಳನ್ನು ತಪ್ಪಿಸಿಕೊಂಡು ಸಂಚಾರ ಮಾಡಲು ವಾಹನ ಸವಾರರು ಪ್ರಾಣವನ್ನು ಪಣಕ್ಕಿಟ್ಟು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೇ, ಈ ರಸ್ತೆ ಬಾಗೇಪಲ್ಲಿ ಹಾಗೂ ಹಲಗೂರು ರಾಜ್ಯ ಹೆದ್ದಾರಿಯಾಗಿದ್ದು, ಪ್ರಸಿದ್ಧ ಕಬ್ಬಾಳಮ್ಮ ದೇವಸ್ಥಾನ ಸೇರಿದಂತೆ ಹಲವಾರು ಪ್ರವಾಸಿತಾಣಗಳಿಗೂ ಸಂಪರ್ಕ ಕೊಂಡಿಯಾಗಿದೆ. ಆದರೆ, ನಗರದಲ್ಲಿ ಈ ರಸ್ತೆ ಆರಂಭದಲ್ಲೆ ಅವ್ಯವಸ್ಥೆಯ ಆಗರವಾಗಿರುವುದು ವಿಪರ್ಯಾಸವೇ ಸರಿ.

ಸಾತನೂರು ಸರ್ಕಲ್​ ಬಳಿಯಿಂದ ಅಂಬೇಡ್ಕರ್​ ನಗರದವರೆಗೆ ರಸ್ತೆಯುದ್ದಕ್ಕೂ ಗುಂಡಿಗಳಿವೆ. ಮಳೆ ಬಂದರಂತೂ ಅದರ ಅವಸ್ಥೆ ಹೇಳತೀರದಾಗಿದೆ. ರಸ್ತೆ ಯಾವುದು? ಗುಂಡಿ ಯಾವುದು ಎಂಬುದೇ ಕಾಣದಂತಾಗುತ್ತದೆ. ಗುಂಡಿಗಳನ್ನು ತಪ್ಪಿಸಲು ಹೋಗಿ ಹಲವಾರು ಅಪಘಾತಗಳಾಗಿರುವ ನಿದರ್ಶನಗಳಿವೆ.

ಸಾವಿನಿಂದ ಬಚಾವಾಗಿದ್ದ ಕಾರ್ಮಿಕರು!ಸಾತನೂರು ಸರ್ಕಲ್​ ಬಳಿ ಇತ್ತೀಚಿಗೆ ಇಟ್ಟಿಗೆ ತುಂಬಿಕೊಂಡು ಚಲಿಸುತ್ತಿದ್ದ ಟ್ರಾಕ್ಟರ್​ನ ಚಕ್ರ ಕಟ್​ ಆಗಿ ಅಫಾತ ಸಂಭವಿಸಿತ್ತು. ಟನೆಯಲ್ಲಿ ಅದೃಷ್ಟವಶಾತ್​ ಬಡ ಕಾರ್ಮಿಕರು ಸಾವಿನ ದವಡೆಯಿಂದ ಪಾರಾಗಿದ್ದು, ರಸ್ತೆಯ ಅವ್ಯವಸ್ಥೆಯೇ ಟನೆಗೆ ಕಾರಣವಾಗಿದೆ. ಇಷ್ಟಾದರೂ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ಅಧಿಕಾರಿಗಳು ಮುಂದಾಗದಿರುವುದು ದುರಂತವೇ ಸರಿ.ಅಧಿಕಾರಿಗಳ ರ್ನಿಲಕ್ಷ$್ಯರಸ್ತೆ ಗುಂಡಿ ಸರಿಪಡಿಸದ ಹಾಗೂ ಅಭಿವೃದ್ಧಿ ಮಾಡದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇಂತಹ ರಸ್ತೆ ಬೊಂಬೆನಾಡಿನ ಇತಿಹಾಸಕ್ಕೆ ಕಪ್ಪುಚುಕ್ಕೆಯಾಗಿದೆ. ಇದಕ್ಕೆ ಲೋಕೋಪಯೋಗಿ ಇಲಾಖೆಯ ಬೇಜವಾಬ್ದಾರಿಯೇ ಕಾರಣ ಎಂದು ವಾಹನ ಸವಾರರು ಆರೋಪಿಸುತ್ತಿದ್ದಾರೆ. ಇನ್ನಾದರೂ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುಂದಾಗಲಿ ಎಂಬುದೇ ಪತ್ರಿಕೆಯ ಆಶಯವಾಗಿದೆ.

2.5 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿಗೆ 4 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಈಗಾಗಲೇ ಟೆಂಡರ್​ ಪ್ರಕ್ರಿಯೆಯೂ ಮುಗಿದಿದ್ದು, ಶ್ರೀದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಕಾವೇರಿ ನೀರು ಸರಬರಾಜು ಪೈಪ್​ಲೈನ್​ ಕಾಮಗಾರಿ ನಡೆಯುತ್ತಿರುವ ಕಾರಣ ರಸ್ತೆ ಕಾಮಗಾರಿ ತಡವಾಗುತ್ತಿದೆ. > ಶಿವಪ್ರಸಾದ್​, ಎಇಇ ಲೋಕೋಪಯೋಗಿ ವಿಶೇಷ ಉಪ ವಿಭಾಗ. ಸಾತನೂರು ಸರ್ಕಲ್​ನಿಂದ ಲಾಳಟ್ಟ ಸರ್ಕಲ್​ವರೆಗೆ ರಸ್ತೆ ಅವ್ಯವಸ್ಥೆ ಆಗರವಾಗಿದೆ. ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದವರು ರ್ನಿಲ್ಯವಹಿಸುತ್ತಿರುವುದೇ ಇದಕ್ಕೆ ಕಾರಣ. ರಸ್ತೆಯಲ್ಲಿರುವ ಗುಂಡಿಗಳಿಗೆ ಜೀವ ಬಲಿ ಪಡೆಯುವ ಅವಕಾಶ ಹೆಚ್ಚಾಗಿದೆ. ಈ ರಸ್ತೆ ನಮ್ಮ ನಗರಕ್ಕೆ ಕಪ್ಪುಚುಕ್ಕಿ ಎಂದರೆ ತಪ್ಪಾಗಲಾರದು. > ಸುಕನ್ಯಾ ಎಂ.ಎನ್​.ರಾಜಶೇಖರ್​, ನಗರವಾಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net