ಶನಿದೇವರ ಕಿರೀಟ ಕದ್ದ ಕಳ್ಳರು

Published on

ಬುಕ್ಕಾಪಟ್ಟಣ: ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಕಿಲಾರದಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿದ್ದ ಶನಿದೇವರ ದೇವಸ್ಥಾನದ ದೇವರ ಬೆಳ್ಳಿಕಿರೀಟ, ಬೆಳ್ಳಿ ಕಣ್ಣು, ಮೀಸೆ, ಚತ್ರಿಕೆಗಳು ಹಾಗೂ ಎರಡು ಹುಂಡಿಯಲ್ಲಿದ್ದ ಹಣವನ್ನು ಶುಕ್ರವಾರ ರಾತ್ರಿ ಕಳ್ಳತನ ಮಾಡಲಾಗಿದೆ. ಎಂದಿನಂತೆ ಅರ್ಚಕರು ಶನಿವಾರ ಮುಂಜಾನೆ ದೇವರ ಪೂಜೆಗೆಂದು ತೆರಳಿದಾಗ ಟನೆ ಬೆಳಕಿಗೆ ಬಂದಿದೆ. ಗ್ರಾಮಸ್ಥರು ಶಿರಾ ನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net