ಸಂಭ್ರಮದ ಶನಿವಾರದಿಂದ ಧನಾತ್ಮಕ ಪರಿಣಾಮ ; ಡಿವೈಪಿಸಿ ಬಸವರಾಜ ಮಿಲ್ಲಾನಟ್ಟಿ ಅಭಿಮತ

IMG-20230716-WA0036.jpg
Published on

ಬೆಳಗಾವಿ : ಇಡೀ ವಾರ ಬ್ಯಾಗ್ ಹೊತ್ತುಕೊಂಡು ಬರುತ್ತಿದ್ದ ವಿದ್ಯಾರ್ಥಿಗಳು ಶಾಲೆಯಲ್ಲಿ ಕೇವಲ ಪಠ್ಯವಸ್ತವನ್ನಷ್ಟೇ ಕಲಿಯುತ್ತಿದ್ದರು ಎಂಬಂತಾಗಿತ್ತು. ಆದರೆ, ಬ್ಯಾಗ್ ಇಲ್ಲದೇ ಶಾಲೆಗೆ ಬರುವ ಮಕ್ಕಳಲ್ಲಿ ಸಹಜವಾಗಿಯೇ ಕುತೂಹಲ ಮೂಡಿರುತ್ತದೆ. ಮಕ್ಕಳಲ್ಲಿ ನೈತಿಕ ಮೌಲ್ಯ ತುಂಬಲು ಹಾಗೂ ಸೂಪ್ತ ಪ್ರತಿಭೆ ಹೊರಬರಲು ಸಂಭ್ರಮದ ಶನಿವಾರ ಮಹತ್ವದ ಪರಿಣಾಮ ಬೀರುತ್ತದೆ ಎಂದು ಡಿವೈಪಿಸಿ ಬಸವರಾಜ ಮಿಲ್ಲಾನಟ್ಟಿ ಅಭಿಪ್ರಾಯಪಟ್ಟರು.

ತಾಲೂಕಿನ ಕಾಕತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಡಯಟ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬ್ಯಾಗ್ ರಹಿತ ಸಂಭ್ರಮದ ಶನಿವಾರ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಬ್ಯಾಗ್ ಇಲ್ಲದ ಸಂಭ್ರಮ ಮಕ್ಕಳ ಕಲಿಕೆಗೆ ಪೂರಕವಾಗಲಿ ಮತ್ತು ಮಕ್ಕಳು ಚಟುವಟಿಕೆಯಿಂದ ಶಾಲಾ ಆಗುಹೋಗುಗಳಲ್ಲಿ ಸಕ್ರಿಯವಾಗಿ ಭಾಗಿಯಾಗಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾಕತಿಯಲ್ಲಿ ನೂತನವಾಗಿ ಆರಂಭವಾದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಶಾಲೆಗೆ ಬೇಕಾಗುವ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ ಹೊಸದಾಗಿ ಆರಂಭವಾಗಿರುವ ಶಾಲೆಯಲ್ಲಿ ವಿಶೇಷ ಆಸಕ್ತಿವಹಿಸಿ ಮಕ್ಕಳ ಸಂಖ್ಯೆಯನ್ನು ವೃದ್ಧಿಸುವುದರ ಜತೆಗೆ ಗುಣಮಟ್ಟದ ಶಿಕ್ಷಣ ನೀಡುವಂತೆ ಶಿಕ್ಷಕರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಶಿಕ್ಷಕರಾದ ಲಲಿತಾ ಮಹಾಜನಶೆಟ್ಟಿ, ಶಶಿಕಲಾ ಹೊಸೂರ, ಗೀತಾ ಖಾನಟ್ಟಿ ವಿಷಯವಾರು ವಾರ್ಷಿಕ ಮಾರ್ಗಸೂಚಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎನ್.ಮಡಿವಾಳರ, ಎ.ಎಸ್.ಕರಾಳೆ, ಎಸ್.ವೈ.ಮರಕುಂಬಿ, ಮಹೇಶ ಅಕ್ಕಿ, ಸುಮಿತ್ರಾ ಕರವಿನಕೊಪ್ಪ, ಶಿವಾನಂದ ತಲ್ಲೂರ ಇತರರಿದ್ದರು.

ಕಾರ್ಯಕ್ರಮದಲ್ಲಿ ಡಿವೈಪಿಸಿ ಬಸವರಾಜ ಮಿಲ್ಲಾನಟ್ಟಿ ಮಾತನಾಡಿದರು. ಲಲಿತಾ ಮಹಾಜನಶೆಟ್ಟಿ, ಶಶಿಕಲಾ ಹೊಸೂರ, ಸುಮಿತ್ರಾ ಕರವಿನಕೊಪ್ಪ, ಗೀತಾ ಖಾನಟ್ಟಿ, ಬಿ.ಎನ್.ಮಡಿವಾಳರ, ಎ.ಎಸ್.ಕರಾಳೆ, ಎಸ್.ವೈ.ಮರಕುಂಬಿ, ಶಿವಾನಂದ ತಲ್ಲೂರ ಮಹೇಶ ಅಕ್ಕಿ, ಇದ್ದರು.  
ಕಾರ್ಯಕ್ರಮದಲ್ಲಿ ಡಿವೈಪಿಸಿ ಬಸವರಾಜ ಮಿಲ್ಲಾನಟ್ಟಿ ಮಾತನಾಡಿದರು. ಲಲಿತಾ ಮಹಾಜನಶೆಟ್ಟಿ, ಶಶಿಕಲಾ ಹೊಸೂರ, ಸುಮಿತ್ರಾ ಕರವಿನಕೊಪ್ಪ, ಗೀತಾ ಖಾನಟ್ಟಿ, ಬಿ.ಎನ್.ಮಡಿವಾಳರ, ಎ.ಎಸ್.ಕರಾಳೆ, ಎಸ್.ವೈ.ಮರಕುಂಬಿ, ಶಿವಾನಂದ ತಲ್ಲೂರ ಮಹೇಶ ಅಕ್ಕಿ, ಇದ್ದರು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net