ಶನಿವಾರ 473 ಜನರಿಗೆ ತಗುಲಿದ ಕರೊನಾ ಸೋಂಕು

corona
Published on

ಬೆಳಗಾವಿ: ಜಿಲ್ಲೆಯಲ್ಲಿ ಶನಿವಾರ 473 ಜನರಿಗೆ ಕರೊನಾ ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 14,221ಕ್ಕೆ ಏರಿಕೆಯಾಗಿದೆ. 331 ಜನ ವೈರಸ್‌ನಿಂದ ಮುಕ್ತರಾಗಿದ್ದು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಈವರೆಗೆ ಒಟ್ಟು 10,145 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಬೆಳಗಾವಿ ನಗರ ಸೇರಿದಂತೆ ಬೆಳಗಾವಿ ತಾಲೂಕಿನಲ್ಲಿ 258, ಗೋಕಾಕ 22, ಚಿಕ್ಕೋಡಿ 52, ಹುಕ್ಕೇರಿ 33, ಬೈಲಹೊಂಗಲ 13, ಸವದತ್ತಿ 17, ರಾಯಬಾಗ 10, ಅಥಣಿ 38, ಖಾನಾಪುರ 25 ಹಾಗೂ ರಾಮದುರ್ಗ 3 ಹಾಗೂ ಹೊರ ಜಿಲ್ಲೆಯ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಸೋಂಕಿನ ಲಕ್ಷಣ ಹೊಂದಿರುವ 3,887 ಜನರು ಜಿಲ್ಲಾಸ್ಪತ್ರೆ ಹಾಗೂ ವಿವಿಧ ಕೋವಿಡ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನಿಂದ ಈವರೆಗೆ 203 ಜನ ಮೃತಪಟ್ಟಿದ್ದಾರೆ. 1,352 ಜನರ ಪರೀಕ್ಷಾ ವರದಿ ಬಾಕಿ ಇದೆ ಎಂದು ಹೆಲ್ತ್ ಬುಲೆಟಿನ್ ತಿಳಿಸಿದೆ.

ಸೋಂಕಿಗೆ ಕಾರ್ಮಿಕ ಬಲಿ: ಅಥಣಿ ಪುರಸಭೆಯ ಪೌರ ಕಾರ್ಮಿಕರೊಬ್ಬರು ಶುಕ್ರವಾರ ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಹೊಳೆಪ್ಪ ಮಾರುತಿ ಭಜಂತ್ರಿ(42) ಮೃತಪಟ್ಟ ಕಾರ್ಮಿಕ. ಹೊಳೆಪ್ಪ ಅವರು ಹಲವು ವರ್ಷಗಳಿಂದ ಪುರಸಭೆಯ ಕಸ ವಿಲೇವಾರಿ ವಾಹನದ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಮೃತರಿಗೆ ಪತ್ನಿ, ಇಬ್ಬರು
ಪುತ್ರರು ಇದ್ದಾರೆ. ಕಳೆದ ವರ್ಷವಷ್ಟೇ ಹೊಳೆಪ್ಪ ಭಜಂತ್ರಿ ಅವರ ನೌಕರಿ ಕಾಯಂ ಆಗಿತ್ತು. ಅವರ ಸಾವು ಆಘಾತ ತಂದಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಎಸ್. ಕವಲಾಪುರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net