ಸಾತ್ವಿಕ ಜೀವನವೇ ಸಿದ್ಧೇಶ್ವರ ಶ್ರೀಗಳ ಆದರ್ಶ

Sattvic life is the ideal of Siddheshwar Shri
ವಿಜಯಪುರದಲ್ಲಿ ಶಿವಬಸವ ಯೋಗಾಶ್ರಮದಲ್ಲಿ ದತ್ತಿ ಉಪನ್ಯಾಸ ಹಾಗೂ 240 ನೇ ಮಾಸಿಕ ಶಿವಾನುಭವ ಗೋಷ್ಠಿಯನ್ನು ಗಣ್ಯರು ಉದ್ಘಾಟಿಸಿದರು. ಜಂಬುನಾಥ ಕಂಚ್ಯಾಣಿ, ಸಂತೋಷ ಬಂಡೆ, ದಾನಮ್ಮತಾಯಿ ಮಠ ಮತ್ತಿತರರಿದ್ದಾರೆ.
Published on

ವಿಜಯಪುರ: ಶತಮಾನದ ಸಂತ ಲಿಂ. ಸಿದ್ಧೇಶ್ವರ ಶ್ರೀಗಳ ಾನಭರಿತ ಪ್ರವಚನಗಳು ಮನದ ಅಂಧಕಾರವನ್ನು ನಿವಾರಿಸಿ ವಿಶ್ವಪ್ರೇಮತ್ವ, ನಿಸರ್ಗದ ಪ್ರೀತಿಯೊಂದಿಗೆ ಮಾನವನಾಗಲು ಸಹಕಾರಿಯಾಗಿವೆ ಎಂದು ಶಿಕ ಸಾಹಿತಿ ಸಂತೋಷ ಬಂಡೆ ಹೇಳಿದರು.

ನಗರದ ಶಿವಬಸವ ಯೋಗಾಶ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್​, ಯುವ ವೇದಿಕೆ ಹಾಗೂ ಯೋಗಾಶ್ರಮದ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಹಾಗೂ 240 ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ "ಸಿದ್ಧೇಶ್ವರ ಶ್ರೀಗಳ ಬದುಕು&ಬರಹ' ಕುರಿತು ಉಪನ್ಯಾಸ ನೀಡಿದ ಅವರು, ಶ್ರೀಗಳು ಪ್ರವಚನದ ಮೂಲಕ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯ ಜಂಬುನಾಥ ಕಂಚ್ಯಾಣಿ ಮಾತನಾಡಿ, ಾನ ದಾಸೋಹದ ಮೂಲಕ ಸರ್ವರಿಗೂ ಸನ್ಮಾರ್ಗದ ದಾರಿ ತೋರಿಸಿದ ಶ್ರೀಗಳು ನಡೆದಾಡುವ ದೇವರಾಗಿದ್ದರು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಮಾತೋಶ್ರೀ ದಾನಮ್ಮತಾಯಿ ಮಠ ಮಾತನಾಡಿ, ಶ್ರೀಗಳು ಜಾತಿ, ಮತ, ಪಂಥಗಳನ್ನು ಮೀರಿ ಅಧ್ಯಾತ್ಮ ಜೀವಿಯಾಗಿ ಬಾಳಲು ತಿಳಿಸಿದ ಅವರ ಶೈಲಿಗೆ ಅವರೇ ಸಾಟಿ ಎಂದರು.

ಪ್ರಧಾನ ಕಾರ್ಯದರ್ಶಿ ಈರಣ್ಣ ತೊಂಡಿಕಟ್ಟಿ ಮಾತನಾಡಿದರು. ಅನುರಾಧ ಪ್ರಾರ್ಥಿಸಿದರು. ಎಂ.ಬಿ. ಗುಮ್ಮಡಿ ಸ್ವಾಗತಿಸಿದರು. ಎಸ್​.ಡಿ. ಕೃಷ್ಣಮೂರ್ತಿ ವಚನ ಹೇಳಿದರು. ಅಮರೇಶ ಸಾಲಕ್ಕಿ ನಿರೂಪಿಸಿದರು. ಸಂಚಾಲಕ ಬಿ.ಎಸ್​. ಗೋಟ್ಯಾಳ, ವಿ.ಎಸ್​. ನಾಡಗೌಡ, ಕೆ.ಎಂ. ಅವಟಿ, ಪಂಡಿತರಾವ ಪಾಟೀಲ, ಸೂರ್ಯಕಾಂತ ಗಡಗಿ, ಚಂದ್ರಶೇಖರ ಪಾಟೀಲ, ಬಿ.ಎಚ್​. ಕಟ್ಟಿಮನಿ, ಮಹಾದೇವಿ ತೆಲಗಿ, ಕಮಲಾ ಗೆಜ್ಜಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net