ರಾಮತೀರ್ಥ ನಗರದಲ್ಲಿ ಸತ್ಸಂತ ಯಶಸ್ವಿ

IMG20241224143705.jpg
Published on

ಬೆಳಗಾವಿ: ರಾಮಕೃಷ್ಣ ಮಿಷನ್ ಆಶ್ರಮದಿಂದ ರಾಮತೀರ್ಥ ನಗರ ಸತ್ಸಂಗ ಸಮಿತಿಯಿಂದ ರಾಮತೀರ್ಥ ನಗರದ ಸಮುದಾಯ ಭವನದಲ್ಲಿ ಸೋಮವಾರ ಸತ್ಸಂಗ ಕಾರ್ಯಕ್ರಮ ನಡೆಯಿತು.

ನವದುರ್ಗಾನಂಜಿ ಮಹಾರಾಜ್ ಮತ್ತು ಪರಮಪೂಜ್ಯ ಮೋಕ್ಷಾತ್ಮಾನಂದಜಿ ಮಹಾರಾಜ ಅವರು ಅತಿಥಿಗಳಾಗಿ ಭಾಗವಹಿಸಿ, ಭಕ್ತರಿಗೆ ಆಧ್ಯಾತ್ಮಿಕ ಶಾಂತಿ ಮತ್ತು ಜ್ಞಾನವನ್ನು ನೀಡಿ ಪ್ರೇರಣೆ ನೀಡಿದರು. ಸತ್ಸಂಗದಲ್ಲಿ ರಾಮಕೃಷ್ಣ ಪರಮಹಂಸ, ವಿವೇಕಾನಂದರ ಆಧ್ಯಾತ್ಮಿಕ ಜೀವನದ ಮೌಲ್ಯಗಳನ್ನು ಹಂಚಿಕೊಳ್ಳಲಾಯಿತು. ಸ್ವಾಮೀಜಿಗಳು ಭಜನೆ, ಧ್ಯಾನ ಮತ್ತು ಭಕ್ತಿಯ ಮಹತ್ವ ವಿವರಿಸಿ, ಪ್ರತಿಯೊಬ್ಬರ ಜೀವನದಲ್ಲಿ ಧ್ಯಾನ ಹೇಗೆ ಆಂತರಿಕ ಶ್ರೇಷ್ಠತೆ ತರುವುದೆಂಬುದು ಕುರಿತು ಅರಿವು ಮೂಡಿಸಿದರು. ರಾಮಕೃಷ್ಣ ಹಾಗೂ ವಿವೇಕಾನಂದರನ್ನು ಸ್ಮರಿಸುವ ಭಕ್ತಿ ಗೀತೆಗಳು ಹಾಡಲಾಯಿತು. ಬಳಿಕ ಸ್ವಾಮೀಜಿಗಳು ರಾಮಕೃಷ್ಣ ಮಿಷನ್ ಆಶ್ರಮದ ನಂಬಿಕೆಗಳು ಮತ್ತು ಭಕ್ತರು ಜೀವನದಲ್ಲಿ ಅನುಸರಿಸಬಹುದಾದ ಪಾಠಗಳನ್ನು ವಿವರಿಸಿದರು. ಸಭೆಯು ಧ್ಯಾನದೊಂದಿಗೆ ಸಮಾಪ್ತಿಗೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net