ಚಿತ್ತ ಶುದ್ಧಿಯಾದರೆ ಜೀವನ ಪಾವನ ;  ಸಾಮಾಜಿಕ ಅರಿವು ಕಾರ್ಯಕ್ರಮದಲ್ಲಿ ಮಹಾಂತೇಶ ತೋರಣಗಟ್ಟಿ ಅಭಿಮತ

IMG-20230723-WA0037.jpg
Published on

ಬೆಳಗಾವಿ :  ನಮ್ಮಲ್ಲಿರುವ ಅಹಂ ತೊರೆದು ಬುದ್ಧಿ ಬಂದು ಚಿತ್ತ ಶುದ್ದಿ ಆಗುವುದರ ಜತೆಗೆ ಮನಸ್ಸು ನಿಯಂತ್ರಣದಲ್ಲಿ ಬಂದು ಮಾದರಿ ಜೀವನ ಸಾಗಿಸಬಹುದು ಎಂದು ಸಂಚಾರಿ ಬಸವದಳದ ಅಧ್ಯಕ್ಷ ಮಹಾಂತೇಶ ತೋರಣಗಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

ಲಿಂಗಾಯತ ಸಂಘಟನೆ ವತಿಯಿಂದ ಬೆಳಗಾವಿಯ ಪ್ರಭು ಹಳಕಟ್ಟಿ ಭವನದಲ್ಲಿ ವಾರದ ಸತ್ಸಂಗ ಮತ್ತು ಪ್ರತಿಷ್ಠಾನ ಭಾನುವಾರ ಹಮ್ಮಿಕೊಂಡಿದ್ದ ಸಾಮಾಜಿಕ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳಗ್ಗಿನ ಬಿಸಿಲು ಹಿತಕರವಾಗಿದ್ದು, ಮಧ್ಯಾಹ್ನದ ಬಿಸಿಲು ದೇಹಕ್ಕೆ ಅಹಿತವಾಗುವಂತೆ ಇದೀಗ ಪ್ರಾರ್ಥನೆ ಸತ್ಸಂಗ ಆರಂಭದಲ್ಲಿ ಒಳ್ಳೆಯದನಿಸಿ ಅದನ್ನು ಮುಂದುವರಿಸಿಕೊಂಡು ಹೋದಾಗ ಮಾತ್ರ ಸತ್ಸಂಗಕ್ಕೆ ಅರ್ಥ ಬಂದು ಏನನ್ನಾದರೂ ಒಳ್ಳೆಯದನ್ನು ಸಾಧಿಸಬಹುದು. ಹಿಂದೆ ಬಂದದ್ದು ಈಗ ಇದ್ದದ್ದು ಮುಂದೆ ಆಗುವದನ್ನು ಅರಿತು ನಾವು ಬದುಕಬೇಕು ಎಂದರು.

ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಡಾ.ನಾನಾ ಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ಸ್ವಯಂಸೇವಕ ರಾಹುಲ ಪರೀಟ ಮಾತನಾಡಿ,   ಸಮಾಜದಲ್ಲಿ ಬದುಕಿರುವವರು ದೇಶಕ್ಕಾಗಿ ಏನನ್ನಾದರೂ ಕೊಡಬೇಕು ಎನ್ನುವ ಮನೋಭಾವದಿಂದ ಮುಂದುವರೆದರೆ ದೇಶವನ್ನು ಮಾದರಿಯಾಗಿ ಕಟ್ಟಬಹುದು ಎಂದರು.
 

ಇದೇ ಸಂದರ್ಭದಲ್ಲಿ  ಪ್ರತಿಷ್ಠಾನದ ಶಂಕರ ದೇವರಕರ, ದೇವರಾಜ ಘೋಡಕೆ ಮತ್ತು ಶಿಕ್ಷಕಿ ಸುಶೀಲಾ ಗುರವ ಅವರನ್ನು ಲಿಂಗಾಯತ ಸಂಘಟನೆ ವತಿಯಿಂದ ಸತ್ಕರಿಸಲಾಯಿತು. ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ಅಧ್ಯಕ್ಷತೆ ವಹಿಸಿದ್ದರು. ವಕೀಲ ಲಕ್ಷ್ಮೀಕಾಂತ ಹೂಗಾರ, ಶ್ರೀಧರ ಗುರವ, ಸಚಿನ ಗುರವ, ಭರಮಪ್ಪ ಜೇವಣಿ, ಬಸವರಾಜ ಕರಡಿಮಠ, ಸತೀಶ ಪಾಟೀಲ, ರಮೇಶ ಕಳಸನ್ನವರ, ವಿ.ಕೆ ಪಾಟೀಲ, ಎಂ.ವೈ.ಮೆಣಸಿನಕಾಯಿ, ಶಿವಾನಂದ ತಲ್ಲೂರ, ಬಾಬು ತಿಗಡಿ, ದೊಡ್ಡ ಗೌಡ ಪಾಟೀಲ, ಶಾಂತಮ್ಮ ತಿಗಡಿ, ದಾಕ್ಷಾಯಿಣಿ ಪೂಜಾರ, ದೀಪಾ ಪಾಟೀಲ, ಶ್ರೀದೇವಿ ನರಗುಂದ ಇತರರಿದ್ದರು. ಮಹಾದೇವಿ ಅರಳಿ ಪ್ರಾರ್ಥಿಸಿದರು. ಸಂಗಮೇಶ ಅರಳಿ ಹಾಗೂ ಸುರೇಶ ನರಗುಂದ ಕಾರ್ಯಕ್ರಮ ನಿರ್ವಹಿಸಿದರು.

ಬೆಳಗಾವಿಯ ಪ್ರಭು ಹಳಕಟ್ಟಿ ಭವನದಲ್ಲಿ ವಾರದ ಸತ್ಸಂಗ ಮತ್ತು ಪ್ರತಿಷ್ಠಾನದಿಂದ ಭಾನುವಾರ ಸಾಮಾಜಿಕ ಅರಿವು ಕಾರ್ಯಕ್ರಮ ಜರುಗಿತು. ಮಹಾಂತೇಶ ತೋರಣಗಟ್ಟಿ, ರಾಹುಲ ಪರೀಟ, ಶಂಕರ ದೇವರಕರ, ದೇವರಾಜ ಘೋಡಕೆ, ಸುಶೀಲಾ ಗುರವ, ಶಿವಾನಂದ ತಲ್ಲೂರ, ಬಾಬು ತಿಗಡಿ, ದೊಡ್ಡ ಗೌಡ ಪಾಟೀಲ, ಶಾಂತಮ್ಮ ತಿಗಡಿ, ದಾಕ್ಷಾಯಿಣಿ ಪೂಜಾರ ಇತರರಿದ್ದರು
ಬೆಳಗಾವಿಯ ಪ್ರಭು ಹಳಕಟ್ಟಿ ಭವನದಲ್ಲಿ ವಾರದ ಸತ್ಸಂಗ ಮತ್ತು ಪ್ರತಿಷ್ಠಾನದಿಂದ ಭಾನುವಾರ ಸಾಮಾಜಿಕ ಅರಿವು ಕಾರ್ಯಕ್ರಮ ಜರುಗಿತು. ಮಹಾಂತೇಶ ತೋರಣಗಟ್ಟಿ, ರಾಹುಲ ಪರೀಟ, ಶಂಕರ ದೇವರಕರ, ದೇವರಾಜ ಘೋಡಕೆ, ಸುಶೀಲಾ ಗುರವ, ಶಿವಾನಂದ ತಲ್ಲೂರ, ಬಾಬು ತಿಗಡಿ, ದೊಡ್ಡ ಗೌಡ ಪಾಟೀಲ, ಶಾಂತಮ್ಮ ತಿಗಡಿ, ದಾಕ್ಷಾಯಿಣಿ ಪೂಜಾರ ಇತರರಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net