ಸತ್ಸಂಗದಿಂದ ಸಿಗಲಿದೆ ಮಾನಸಿಕ ನೆಮ್ಮದಿ

28NRGL2
Published on

ನರೇಗಲ್ಲ: ನಿತ್ಯದ ಜಂಜಡದ ಬದುಕಿನಲ್ಲಿ ಮನುಷ್ಯ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ಸತ್ಸಂಗದಿಂದ ಮಾತ್ರ ಅವನಿಗೆ ಮಾನಸಿಕ ನೆಮ್ಮದಿ ದೊರಕುತ್ತದೆ. ಸತ್ಸಂಗವು ಮನುಷ್ಯನ ನೆಮ್ಮದಿ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.

ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಶನಿವಾರ ಆಯೋಜಿಸಿದ್ದ ಎರಡನೇ ವಾರದ ಹನುಮಾನ ಚಾಲೀಸಾ ಪಠಣದ ಸತ್ಸಂಗದಲ್ಲಿ ಅವರು ಮಾತನಾಡಿದರು. ಪ್ರತಿ ಗುರುವಾರ ನಡೆಸುವ ಈ ಸತ್ಸಂಗದಲ್ಲಿ 13 ಬಾರಿ ಹನುಮಾನ ಚಾಲೀಸಾ ಪಠಿಸಿ ಅದೆಷ್ಟೋ ಜನ ನೆಮ್ಮದಿ ಕಂಡುಕೊಂಡಿದ್ದಾರೆ. ಇಂತಹ ಸತ್ಸಂಗಗಳಿಗೆ ಮಕ್ಕಳನ್ನೂ ಕರೆದುಕೊಂಡು ಹೋಗಬೇಕು. ಒಮ್ಮೆ ಅವರು ಸತ್ಸಂಗದ ಮೋಹಕ್ಕೆ ಒಳಪಟ್ಟರೆ ಸಮಾಜದ ಸುಸಂಸ್ಕೃತ ವ್ಯಕ್ತಿಗಳಾಗುತ್ತಾರೆ. ಚಿಕ್ಕಂದಿನಲ್ಲೇ ಮನೆಯಲ್ಲಿ ಮಕ್ಕಳಿಗೆ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಕಲಿಸಿದರೆ ಅವರೆಂದಿಗೂ ಕೆಟ್ಟ ವ್ಯಕ್ತಿಗಳಾಗುವುದಿಲ್ಲ. ಅಷ್ಟೊಂದು ಶಕ್ತಿ ಸತ್ಸಂಗದಲ್ಲಿದೆ ಎಂದರು.

ಎ. ಜಿ. ಕುಲಕರ್ಣಿ, ನಾಗೇಶಭಟ್ಟ ಗ್ರಾಮಪುರೋಹಿತ, ಬಿ.ಎಲ್. ಕುಲಕರ್ಣಿ, ಅಜಿತ ಕುಲಕರ್ಣಿ, ಮುಕುಂದ ಸೂರಭಟ್ಟನವರ, ವಿಮಲಾಬಾಯಿ ಗ್ರಾಮಪುರೋಹಿತ, ಶೋಭಾ ಕುಲಕರ್ಣಿ, ಸನ್ಮತಿ ಸದರಜೋಷಿ, ಪದ್ಮಾ ಕುಲಕರ್ಣಿ, ಪ್ರಿಯಾ ಕುಲಕರ್ಣಿ, ಶೋಭಾ ಸೂರಭಟ್ಟನವರ, ಪ್ರಭಾ ರಾಯಭಟ್ಟನವರ, ರಾಜಶ್ರೀ ಕುಲಕರ್ಣಿ, ವಾಣಿ, ಭಾಗ್ಯಾಬಾಯಿ ಕಾಳೆ, ವಿದ್ಯಾ ಗ್ರಾಮಪುರೋಹಿತ, ಲಕ್ಷ್ಮೀ ಗ್ರಾಮಪುರೋಹಿತ, ಸುಶೀಲಾ ಪುರಾಣಿಕ, ಅನಿತಾ ಗ್ರಾಮಪುರೋಹಿತ, ರೇಣುಕಾ ಗ್ರಾಮಪುರೋಹಿತ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net