

ಸೋಮವಾರಪೇಟೆ: ವೈಕುಂಠ ಏಕಾದಶಿಯ ಪ್ರಯುಕ್ತ ಪಟ್ಟಣದ ಶ್ರೀರಾಮ ಮಂದಿರದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸೂರ್ಯಪಾದಜೀ ಅವರು ಸತ್ಸಂಗ ಕಾರ್ಯಕ್ರಮವನ್ನು ಸೋಮವಾರ ಸಂಜೆ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸ್ವಾಮೀಜಿ ಅವರು ದೇವರ ಸಂಕೀರ್ತನೆಯೊಂದಿಗೆ, ವೈಕುಂಠ ಏಕಾದಶಿಯ ಮಹತ್ವ, ನಾರಾಯಣ ನಾಮ ಸ್ಮರಣೆಯಿಂದ ಆಗುವ ಪ್ರಯೋಜನ, ಆಧ್ಯಾತ್ಮಿಕ ಮಾರ್ಗದಲ್ಲಿರುವ ಸುಖ, ಶಾಂತಿಯ ಬಗ್ಗೆ ಮಾಹಿತಿ ನೀಡಿದರು.
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನ ಗಾಯಕರಾದ ರಂಜನಿ ರಘು ಮತ್ತು ಅಪೆಕ್ಸ್ ಸದಸ್ಯರಾದ ರಮಾನಂದ, ಕೊಡಗು ಜಿಲ್ಲೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಂಯೋಜಕ ಕಾರ್ಯಪ್ಪ, ಶಿಕ್ಷಕಿ ರಾಗಿಣಿ, ಮಡಿಕೇರಿಯ ಕೆ.ಡಬ್ಲುೃ.ಬೋಪಯ್ಯ, ಕೃಷ್ಣ ಬೋಪಯ್ಯ ಇದ್ದರು.