

ಜಮಖಂಡಿ: ಮನುಷ್ಯನಲ್ಲಿನ ಚಿಂತೆ ದೂರಾಗಬೇಕಾದರೆ ಮಠ, ಮಂದಿರಗಳಲ್ಲಿ ನಡೆಯುವ ಸತ್ಸಂಗದಲ್ಲಿ ಭಾಗಿಯಾಗಬೇಕು, ವಚನ ಸಾಹಿತ್ಯ, ಪ್ರವಚನ ಆಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಪಟ್ಟಣದಲ್ಲಿ ನಡೆದ ಶ್ರೀ ರುದ್ರಾವಧೂತರ 94 ನೇ ಪುಣ್ಯಾರಾಧನೆ ಹಾಗೂ 39ನೇ ವೇದಾಂತ ಪರಿಷತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಮನಸ್ಸಿಗೆ ನೆಮ್ಮದಿ ದೊರಯಬೇಕಾದರೆ ಜೀವನದಲ್ಲಿ ಆಧ್ಯಾತ್ಮಿಕ ಅಳವಡಿಸಿಕೊಳ್ಳಬೇಕು ಪ್ರವಚನ ಕೀರ್ತನ ಕೇಳಿ ಶ್ರೀಗಳ ದರ್ಶನ ಆಶೀರ್ವಾದ ಪಡೆದುಕೊಂಡರೆ ಮಾತ್ರ ಜೀವನ ಸುಖಮಯವಾಗುತ್ತದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಸಮಾಜದ ಒಳಿತಿಗಾಗಿ ಯಾರು ಶ್ರಮಿಸುತ್ತಾರೋ ಅಂಥವರು ಸದಾ ಜನರ ಮನಸ್ಸಿನಲ್ಲಿರುತ್ತಾರೆ. 12 ಶತಮಾನದಲ್ಲಿ ಸಮಾನತೆಗಾಗಿ ಶ್ರಮಿಸಿದ ಶರಣರು ಇಂದಿಗೂ ನಮ್ಮ ಹೃದಯದಲ್ಲಿದ್ದಾರೆ ಎಂದರು.
ವಿಜಯಪುರ ಷಣ್ಮುಖಾರೂಡಮಠದ ಅಭಿನವ ಸಿದ್ದಾರೂಡ ಶ್ರೀಗಳು, ಇಂಚಗೇರಿ ಸಂಪ್ರದಾಯ ಹಿಪ್ಪರಗಿ ಮಠದ ಪ್ರಭುಜೀ ಮಹಾರಾಜರು, ರುದ್ರಾವಧೂತ ಮಠದ ಸಹಜಾನಂದ ಅವಧೂತರು, ನಾಗೇಶ್ವರ ಶ್ರೀ, ಉಪ್ಪಾರಟ್ಟಿ ಸ್ವರೂಪಾನಂದ ಶ್ರೀ, ಕೋಳಿಗುಡ್ಡ ಅಮರೇಶ್ವರ ಶ್ರೀ ಸಾನ್ನಿಧ್ಯ ವಹಿಸಿದ್ದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ, ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ, ತಹಸೀಲ್ದಾರ್ ಸದಾಶಿವ ಮಕ್ಕೋಜಿ, ಸಿಪಿಐ ಮಲ್ಲಪ್ಪ ಮಡ್ಡಿ, ನಗರಸಭೆ ಪೌರಾಯುಕ್ತ ಜ್ಯೋತಿ ಗಿರೀಶ, ರವಿ ತೊದಲಬಾಗಿ, ಈಶ್ವರ ವಾಳೇನ್ನರ, ದಿಲಾವರ ಶಿರೋಳ, ಚನ್ನಬಸಪ್ಪ ಕತಾಟೆ, ಸುನೀಲ ಶಿಂಧೆ, ಶ್ಯಾಮ ಘಾಟಗೆ, ಯಮನೂರ ಮೂಲಂಗಿ, ಕುಶಾಲ ವಾಗಮೋರೆ, ಮಹೇಶ ಕೋಳಿ, ಪೀರಾ ಖಾದ್ರಿ, ಶಿವಾನಂದ ಆಲಬಾಳ, ಭೀಮಶಿ ನಡುವಿನಮನಿ, ಶಶಿಕಾಂತ ದೊಡಮನಿ, ಬಸವರಾಜ ಹರಕಂಗಿ, ಸಂಗಮೇಶ ನ್ಯಾಮಗೌಡ, ಸಂತೋಷ ಶೆಟ್ಟಿ, ಇತರರು ಇದ್ದರು.