ಸಾರ್ಥಕ ಬದುಕಿಗೆ ಸತ್ಸಂಗ ಅಗತ್ಯ

Satsang is necessary for a meaningful life.
ಕಲಾದಗಿಯ ಶ್ರೀ ಸಾಯಿಮಂದಿರದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಅಡವೇಶ್ವರ ಶಾಸಿಗಳು, ಕೃಷ್ಣ ಶಾಸಿಗಳು ಪ್ರವಚನ ನೀಡಿದರು.
Published on

ಕಲಾದಗಿ: ಸತ್ಸಂಗದಲ್ಲಿ ಪಾಲ್ಗೊಳ್ಳುವುದರ ಮೂಲಕ ಜಂಜಾಟ ದುರಾಸೆಗಳಿಂದ ಕೂಡಿದ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದು ಅಡವೇಶ್ವರ ಶಾಸಿಗಳು ಹೇಳಿದರು.

ಗ್ರಾಮದ ಶ್ರೀ ಸಾಯಿಬಾಬಾ ಮಂದಿರದಲ್ಲಿ ಭಗವದ್ಗೀತೆ ಕುರಿತು ಮಾಸಿಕ ಪ್ರವಚನ ನೀಡಿ ಮಾತನಾಡಿದ ಅವರು, ಭವದ್ಗೀತೆಯೆಂದರೆ ಬರೀ ಪುಸ್ತಕವಲ್ಲ. ನಮ್ಮಲ್ಲಿರುವ ಕೆಟ್ಟದನ್ನು ಅಳಿಸಿ, ಒಳ್ಳೆಯದನ್ನು ರೂಪಿಸುವ ಶಕ್ತಿ ಈ ಮಹಾ ಗ್ರಂಥಕ್ಕಿದೆ ಎಂದರು.

ನಮ್ಮ ಮನೆ ಮನಗಳಲ್ಲಿ ಬೇಕು ಬೇಡಗಳ ನಡುವೆ ನಿತ್ಯ ನಡೆಯುತ್ತಿರುವ ಕುರುಕ್ಷೇತ್ರವನ್ನು ಗೆಲ್ಲಲು ಶ್ರೀಕೃಷ್ಣ ಪರಮಾತ್ಮ ಬೋಧಿಸಿದ ಭಗವದ್ಗೀತೆಯನ್ನು ಅರ್ಥ ಮಾಡಿಕೊಳ್ಳಬೇಕು. ಭಗವದ್ಗೀತೆ ಸಾರ್ವಕಾಲಿಕ ಸತ್ಯ ಎಂದರು.

ಖಜ್ಜಿಡೋಣಿಯ ಕೃಷ್ಣ ಶಾಸಿಗಳು ಮಾತನಾಡಿ, ಕಳೆದ 19 ತಿಂಗಳಿಂದ ಪ್ರತಿ ಹುಣ್ಣಿಮೆಯಂದು ಆಯೋಜಿಸುತ್ತಿರುವ ಭಗವದ್ಗೀತಾ ಪ್ರವಚನದಲ್ಲಿ ಇನ್ನಷ್ಟು ಜನ ಪಾಲ್ಗೊಳ್ಳಬೇಕು. ಉತ್ತಮ ಜೀವನ ಕಟ್ಟಿಕೊಳ್ಳಲು ಇದೊಂದು ಸದಾವಕಾಶ ಎಂದರು.

ಚಿಕ್ಕಸಂಶಿಯ ಕೃಷ್ಣ ಪತ್ತಾರ ನೇತೃತ್ವದ ಶ್ರೀ ಮಾರುತೇಶ್ವರ ಭಜನಾ ಮಂಡಳಿಯವರಿಂದ ಭಜನೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net