ಸನ್ಮಾರ್ಗದಲ್ಲಿ ನಡೆಯಲು ಸತ್ಸಂಗ ಸಹಕಾರಿ

Satsang helps in walking on the right path.
ನಂದಗಾಂವ ಗ್ರಾಮದ ಸಂಗಪ್ಪ ಉಪ್ಪಲದಿನ್ನಿ ಅವರ ತೋಟದಲ್ಲಿ ಜರುಗಿದ ಸತ್ಸಂಗ ಕಾರ್ಯಕ್ರಮದಲ್ಲಿ ಲಕ್ಷ್ಮಣ ಕಿಶೋರ ಮಾತನಾಡಿದರು. ಅಣ್ಣಾಜಿ ಡತಾರೆ, ವಿರೇಶ ಆಸಂಗಿ ಇದ್ದಾರೆ.
Published on

ಮಹಾಲಿಂಗಪುರ: ಸತ್ಸಂಗದಲ್ಲಿ ಭಾಗವಹಿಸುವುದರಿಂದ ಮಾನಸಿಕ ಜಂಜಾಟದಿಂದ ಮುಕ್ತನಾಗಿ ಸನ್ಮಾರ್ಗದಲ್ಲಿ ನಡೆಯಲು ಸಹಕರಿಯಾಗುತ್ತದೆ ಎಂದು ಮಕ್ಕಳ ಸಾಹಿತಿ ಅಣ್ಣಾಜಿ ಡತಾರೆ ಹೇಳಿದರು.

ಸಮೀಪದ ನಂದಗಾಂವ ಗ್ರಾಮದ ಸಂಗಪ್ಪ ಉಪ್ಪಲದಿನ್ನಿ ತೋಟದಲ್ಲಿ ಹೋಳಿಹುಣ್ಣಿಮೆ ಪ್ರಯುಕ್ತ ಇತ್ತೀಚೆಗೆ ಆಯೋಜಿದ್ದ ಶಿವಾನುಭವ ಗೋಷ್ಠಿ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯ ಎಷ್ಟೇ ಮುಂದುವರಿದರೂ ನಡೆದು ಬಂದ ದಾರಿಯನ್ನು ಮರೆಯಬಾರದು. ತಂದೆ, ತಾಯಿ ಹಾಗೂ ಗುರುವಿನ ಋಣ ತೀರಿಸಲು ಯಾರಿಗೂ ಸಾಧ್ಯವಿಲ್ಲ. ಆದರೆ, ಸಮಾಜದಲ್ಲಿ ಉತ್ತಮ ಕಾರ್ಯ ಮಾಡುವುದರ ಮೂಲಕ ಆ ಋಣ ಕಡಿಮೆ ಮಾಡಿಕೊಳ್ಳಲು ಸಾಧ್ಯ ಎಂದರು.

ರಬಕವಿ ಬನಹಟ್ಟಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ವೀರೇಶಕುಮಾರ ಆಸಂಗಿ ಮಾತನಾಡಿ, ಶರಣರ ಬದುಕು ಮನುಕುಲಕ್ಕೆ ದಾರಿದೀಪ. ಅವರ ಉಪದೇಶದಂತೆ ನಡೆದರೆ ಸುಖ, ಶಾಂತಿ ನೆಮ್ಮದಿ ಸಾಧ್ಯ. ನೆಮ್ಮದಿ ಇಲ್ಲದ ಬದುಕು ನರಕಕ್ಕೆ ಸಮ. ಅಧ್ಯಾತ್ಮ ಎನ್ನುವುದು ಮನುಷ್ಯನಿಗೆ ಜ್ಞಾನ ಮತ್ತು ನೆಮ್ಮದಿ ನೀಡುತ್ತದೆ ಎಂದರು.

ಯುವ ಜನತೆ ದುಶ್ಚಟಗಳ ದಾಸರಾಗಿ ಜೀವನನ್ನೇ ಹಾಳು ಮಾಡಿಕೊಳ್ಳುತ್ತಿರುವುದು ವಿಷಾದಕರ ಸಂಗತಿ. ಭಾರತ ದೇಶ ವಿಶ್ವಕ್ಕೆ ಅಧ್ಯಾತ್ಮ ಬೋಧಿಸಿ ಜಗತ್ತನ್ನೇ ಇಂದು ಅಧ್ಯಾತ್ಮದತ್ತ ತಿರುಗುವಂತೆ ಮಾಡಿದೆ. ಮಕ್ಕಳಿಗೆ ಮೊದಲು ಸಂಸ್ಕಾರ, ಸಹಬಾಳ್ವೆ, ಕಲಿಸುವುದು ಮುಖ್ಯವಾಗಿದೆ ಎಂದರು.

ಕಸಾಪ ರಬಕವಿ ಬನಹಟ್ಟಿ ತಾಲೂಕು ಘಟಕದ ಅಧ್ಯಕ್ಷ ಮ.ಕೃ. ಮೆಗಾಡಿ, ಲಕ್ಷ್ಮಣ ಕಿಶೋರ ಮಾತನಾಡಿದರು. ಸಂಗಪ್ಪ ಉಪ್ಪಲದಿನ್ನಿ ಅಧ್ಯಕ್ಷತೆ ವಹಿಸಿದ್ದರು.

ಮುಖಂಡರಾದ ಸಿದ್ದು ಟಿರ್ಕಿ, ರಮೇಶ ಮಡಿವಾಳ, ಶಿವಾನಂದ ಮರೆಗುದ್ದಿ, ಅಶೋಕ ಸುಣದೊಳಿ, ಮಹದೇವ ಧಡೂತಿ, ಜಯವಂತ ಬಾಡಗಿ, ವಿಷ್ಣು ಬಡಿಗೇರ, ತೇರದಾಳದ ಗೋಪಾಲ, ಎಸ್.ಕೆ. ಗಿಂಡೆ ಮತ್ತಿತರರಿದ್ದರು. ಶಿಕ್ಷಕ ಬಸವರಾಜ ಮೇಟಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net