

ವಿಜಯವಾಣಿ ಸುದ್ದಿಜಾಲ ಧಾರವಾಡ
ಚಿನ್ಮಯ ಮಿಷನ್ ವತಿಯಿಂದ ಧಾರವಾಡ ಕಲ್ಯಾಣನಗರದ ಶ್ರೀ ದತ್ತ ಸಭಾಭವನದಲ್ಲಿ ಸೆ. 14ರಿಂದ 20ರವರೆಗೆ ಆದಿ ಶಂಕರಾಚಾರ್ಯ ವಿರಚಿತ ಧನ್ಯಾಷ್ಟಕಮ್ ಕುರಿತು ಸತ್ಸಂಗ ಏರ್ಪಡಿಸಲಾಗಿದೆ.
ತುಮಕೂರಿನ ಸ್ವಾಮಿ ಗಹನಾನಂದ ಸರಸ್ವತಿ ಅವರು ನಿತ್ಯ ಸಂಜೆ 6 ಗಂಟೆಯಿಂದ ಧನ್ಯಾಷ್ಟಕಮ್ ಕುರಿತು ಪ್ರವಚನ ನೀಡಲಿದ್ದಾರೆ. ಸ್ವಾಮಿ ಗಹನಾನಂದಜೀ ಮೂಲತಃ ಬೆಂಗಳೂರಿನವರು. 12 ವರ್ಷಗಳ ಕಾಲ ಕೆಇಬಿಯಲ್ಲಿ ವೃತ್ತಿ ನಿರ್ವಹಿಸಿ, ಅಧ್ಯಾತ್ಮದತ್ತ ಒಲವು ಹೆಚ್ಚಾದ ಕಾರಣ ಕೆಲಸಕ್ಕೆ ರಾಜೀನಾಮೆ ನೀಡಿ ಸನ್ಯಾಸತ್ವ ಸ್ವೀಕರಿಸಿದವರು. 2011ರಲ್ಲಿ ಹಿಮಾಚಲ ಪ್ರದೇಶದ ಸಿದ್ಧಾಬಾರಿ ಆಶ್ರಮದಲ್ಲಿ ಸ್ವಾಮಿ ತೇಜೋಮಯಾನಂದಜೀ ಅವರಿಂದ ಸನ್ಯಾಸ ದೀಕ್ಷೆ ಪಡೆದು, ಸ್ವಾಮಿ ಬ್ರಹ್ಮಾನಂದಜೀ ಮಾರ್ಗದರ್ಶನದಲ್ಲಿ ಕರ್ನಾಟಕದ ಚಿನ್ಮಯ ಮಿಷನ್ನ ಅನೇಕ ಕೇಂದ್ರಗಳಲ್ಲಿ ಆಚಾರ್ಯರಾಗಿ ಕಾರ್ಯ ನಿರ್ವಹಿಸಿದ್ದು, ಸದ್ಯ ತುಮಕೂರಿನ ಚಿನ್ಮಯ ಮಿಷನ್ ಆಚಾರ್ಯರಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.