ಸತ್ಸಂಗದಿಂದ ಆತ್ಮೋದ್ಧಾರ

5 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಆತ್ಮ ಸಾಕ್ಷಾತ್ಕಾರಕ್ಕೆ ಭಾವ ಶುದ್ಧಿ ಅಗತ್ಯ. ಸತ್ಸಂಗದಿಂದ ಆತ್ಮೋದ್ಧಾರವಾಗುತ್ತದೆ ಎಂದು ಹಿರಿಯ ವೈದ್ಯ ಡಾ. ಎಸ್​.ಆರ್​. ರಾಮನಗೌಡರ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಬಸಯ್ಯ ಶಿವಯ್ಯ ಶಿರೋಳ ದತ್ತಿ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಯೋಗವಾಸಿಷ್ಠ ವಿಷಯ ಕುರಿತು ಮಾತನಾಡಿದರು.

ವಾಸಿಷ್ಠರು ಶ್ರೀರಾಮನ 42 ಪ್ರಶ್ನೆಗಳಿಗೆ ಸಂಬಂಧಿಸಿದಂತೆ ನೀಡಿದ ಉತ್ತರಗಳನ್ನು ಒಳಗೊಂಡಿದೆ. ಬಹಿರ್ಮುಖವಾಗಿರುವ ಮನಸ್ಸನ್ನು ಒಮ್ಮುಖಗೊಳಿಸಿ ಮುಕ್ತಿ ಪಡೆಯುವ ಮಾರ್ಗ, ಅಜ್ಞಾನ ಎಂಬ ಕತ್ತಲೆ ಕಳೆದು ಮಾನವ ಜನ್ಮ ಸಾರ್ಥಕಗೊಳಿಸಿಕೊಳ್ಳುವುದರ ಮೂಲಕ ಪರಮ ಸುಖದ ಮಾರ್ಗವನ್ನು ಯೋಗ ವಾಸಿಷ್ಠದಲ್ಲಿ ತಿಳಿಸಲಾಗಿದೆ . ಮನುಷ್ಯ ಜೀವನದ ಪರಿಪೂರ್ಣ ಬದುಕಿಗೆ ಈ ಗ್ರಂಥ ಸಹಕಾರಿಯಾಗಲಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಾಶಿ ಮೊದಲ ವಿದ್ಯಾ ಕೇಂದ್ರವಾದರೆ, ಧಾರವಾಡ ೨ನೇಯದ್ದು. ಇಂದಿನ ಸಂಸಾರ ಜಂಜಾಟದಿಂದ ಗ್ರಂಥ ಓದಲು ಸಾಧ್ಯವಾಗದಿದ್ದರೆ ಇಂತಹ ಉಪನ್ಯಾಸ ಕೇಳಿ ಸಾರ್ಥಕ ಬದುಕು ನಿಮ್ಮದಾಗಬೇಕು. ಡಾ ಎಸ್​. ಆರ್​. ರಾಮನಗೌಡರ ವೈದ್ಯರಾಗಿ ಆಧ್ಯಾತ್ಮಿಕ ಕ್ಷೇತ್ರದ ದೊಡ್ಡ ಸಾಧಕರಾಗಿದ್ದಾರೆ ಎಂದರು.

ಪ್ರೊ. ಬಸಯ್ಯ ಶಿರೋಳ, ಡಾ. ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಡಾ. ಸಿ, ಆರ್​, ಯರವಿನತೆಲಿಮಠ, ಡಾ. ಡಿ. ಎಂ. ಹಿರೇಮಠ, ನಿಂಗಣ್ಣ ಕುಂಟಿ, ಡಾ. ಬಾಳಣ್ಣ ಶೀಗಿಹಳ್ಳಿ, ಸಿ.ಎಸ್​. ಪಾಟೀಲ, ಡಾ. ಆನಂದ ಪಾಟೀಲ, ರಾಜೇಂದ್ರ ಸಾವಳಗಿ, ಡಾ. ಚಿದಾನಂದ ಮಾಸನಕಟ್ಟಿ, ಚಂದ್ರಶೇಖರ ಅಮೀನಗಡ, ಇತರರು ಇದ್ದರು.

ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ವೀರಣ್ಣ ಒಡ್ಡಿನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net