

ಹಂದಿಗುಂದ: ಜಿಲ್ಲಾ ಉಸ್ತವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಮೌಢ್ಯತೆ ಹೋಗಲಾಡಿಸಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಸೇರಿ ನಾಡಿನ ದಾರ್ಶನಿಕರಣ ವೈಚಾರಿಕ ಹಾಗೂ ಪ್ರಗತಿಪರ ವಿಚಾರಧಾರೆ ಹೊಂದಿದ್ದಾರೆ ಎಂದು ಎಂಎಲ್ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ರಾಯಬಾಗ ತಾಲೂಕು ಕಪ್ಪಲಗುದ್ದಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂತಶ್ರೇಷ್ಠ ಕನಕದಾಸರ ಕಂಚಿನ ಮೂರ್ತಿ ಲೋಕಾರ್ಪಣೆ ಹಾಗೂ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ತಂದೆ ಸಿಎಂ ಸಿದ್ದರಾಮಯ್ಯ ಅವರ ಕಷ್ಟದ ಕಾಲದ ದಿನಗಳಲ್ಲಿ ಜಾರಕಿಹೊಳಿ ಕುಟುಂಬದವರ ಸಹಾಯ ಸಹಕಾರ ಮರೆಯುವಂತಿಲ್ಲ. ಸಿದ್ದರಾಮಯ್ಯ ಅವರ ರೀತಿ ಸಚಿವ ಸತೀಶ ಪ್ರಗತಿಪರ ವಿಚಾರ ಹೊಂದಿದವರಾಗಿದ್ದು, ಜನಸಾಮಾನ್ಯರಿಂದ ಹಿಡಿದು ಎಲ್ಲರೂ ಒಪ್ಪುವ ನಾಯಕರಾಗಿರುವುದರಿಂದ ಅವರು ರಾಜ್ಯದ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, 15ನೆಯ ಶತಮಾನದಲ್ಲಿ ಕನಕದಾಸರು ಶೋಷಿತ ಸಮುದಾಯವನ್ನು ಮೇಲೆತ್ತಲು ಪ್ರಯತ್ನಿಸಿದ್ದರು. ಬಸವಣ್ಣನವರ ಹಾಗೆ ಕನಕದಾಸರು ಸಮಾಜ ಸುಧಾರಣೆ ಬಯಸಿದ್ದರು. ಕನಕದಾಸರಂತೆ ಇನ್ನಿತರ ಹೋರಾಟಗಾರರ ಮೂರ್ತಿಗಳು ನಿರ್ಮಾಣವಾಗಬೇಕು. ಸಾಮಾಜಿಕ ನ್ಯಾಯ ಶೋಷಿತ ಹಾಗೂ ಬಡವರ ಪರವಾದ ಗ್ಯಾರಂಟಿ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅನುಷ್ಠಾನಗೊಳಿಸಿದ್ದು ಶ್ಲಾನೀಯ ಎಂದರು.
ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಹಾಗೂ ಸಚಿವ ಸತೀಶ ಜಾರಕಿಹೊಳಿ ಅವರನ್ನು ಲಿಂಗಾಯತ, ಹಾಲುಮತ ಹಾಗೂ ಉಪ್ಪಾರ ಸಮುದಾಯದ ವತಿಯಿಂದ ಸತ್ಕರಿಸಲಾಯಿತು.
ಅರಕೇರಿ ಹಾಲುಮತ ಮೂಲಪೀಠ ಮುಮ್ಮೆಟ್ಟುಗುಡ್ಡದ ಪೀಠಾಧಿಪತಿ ಅಭಿನವ ಅವಧೂತ ಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕವಲಗುಡ್ಡ ಸಿದ್ದಾಶ್ರಮದ ಪೀಠಾಧಿಪತಿ ಅಮರೇಶ್ವರ ಮಹಾರಾಜರು, ಇಟ್ನಾಳ ಮೆಲಾರಲಿಂಗೇಶ್ವರ ಆಶ್ರಮದ ಪೀಠಾಧಿಪತಿ ಸಿದ್ದೇಶ್ವರ ಸ್ವಾಮೀಜಿ, ಜೋಕಾನಟ್ಟಿ ಶಿವಯೋಗೇಶ್ವರ ಆಶ್ರಮದ ಬಿಳಿಯಾನಸಿದ್ಧ ಮಹಾರಾಜರು, ಹಂದಿಗುಂದ ಹಾಲಸಿದ್ದೇಶ್ವರ ಆಶ್ರಮದ ಶ್ರೀಮಂತ ಶಿವಯೋಗಿಗಳು, ನಿಪನಾಳ ಸೋಬಲಿಂಗೇಶ್ವರ ದೇವಋಷಿ, ಹಿಡಕಲ್ಲ ಮಲ್ಲಸಿದ್ದ ಒಡೆಯರ, ಪಂಚಾರಿ ಸ್ವಾಮೀಜಿ, ಬುಡಾ ಅಧ್ಯ ಲಕ್ಷ$್ಮಣರಾವ ಚಿಂಗಳೆ, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯ ಭರಮಣ್ಣ ಉಪ್ಪಾರ, ಮಹಾಲಿಂಗಪುರದ ಸಿದ್ದು ಕೊಣ್ಣೂರ, ರಾಜ್ಯ ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯ ವಿನಯ ನವಲಗಟ್ಟಿ, ಕಾಶೀನಾಥ ಹುಡೇದ, ರಾಮಕಷ್ಣ ರೊಳ್ಳಿ, ಸಂಜೀವಕುಮಾರ ಬಾನೆ, ಜಿಪಂ ಮಾಜಿ ಸದಸ್ಯ ಡಿ.ಎಸ್.ನಾಯಿಕ, ರಾಜ್ಯ ಪ್ರದೇಶ ಕುರುಬರ ಸಂದ ಮಾಜಿ ಅಧ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಬಸವರಾಜ ಬಸರಿಗುಂದಿ, ಡಿವೆಎಸ್ಪಿ ಬಿ.ಎಸ್.ಮಂಟೂರ, ಜಿಪಂ ಮಾಜಿ ಸದಸ್ಯ ಭೀಮಪ್ಪ ಮಗದುಮ್ಮ, ಸಿದ್ದಣ್ಣ ದುರದುಂಡಿ, ನಿಂಗಪ್ಪ ನಿಡಗುಂದಿ, ಸದಾಶಿವ ಸನದಿ, ಮಲ್ಲಪ್ಪ ಸಿಂಗಾಡಿ, ಬಾಳಪ್ಪ ನಿಡಗುಂದಿ, ಲಕ್ಕಪ್ಪ ಬಿಳಿಕುರಿ ಜ್ಯೋತೆಪ್ಪ ಬಿಳಿಕುರಿ, ಭರಮಪ್ಪ ರಾಜಾಪುರ, ಸುರೇಶ ಸಿಂಗಾಡಿ, ಶಿವಾಜಿ ಸಿಂಗಾಡಿ, ಮಹಾದೇವ ಸುಬಾನಿ, ಮಲ್ಲಪ್ಪ ಬಿದರಿ, ಭರಮಪ್ಪ ಬಾಗೋಜಿ ಇದ್ದರು. ಮಧುಸೂದನ ಬೀಳಗಿ ಸ್ವಾಗತಿಸಿದರು. ಬಿ.ಎಲ್.ಂಟಿ ನಿರೂಪಿಸಿದರು.