ಅಜ್ಜೀಬಳ ಪುರಸ್ಕಾರಕ್ಕೆ ಸತೀಶ ತಾಂಡೇಲ ಆಯ್ಕೆ

8sirsi2 tandel
Published on

ಶಿರಸಿ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ 2023ನೇ ಸಾಲಿನ ಜಿ.ಎಸ್. ಹೆಗಡೆ ಅಜ್ಜೀಬಳ ಪುರಸ್ಕಾರಕ್ಕೆ ಹೊನ್ನಾವರದ ಪತ್ರಕರ್ತ ಸತೀಶ ತಾಂಡೇಲ ಆಯ್ಕೆಯಾಗಿದ್ದರೆ.

ಹೊನ್ನಾವರ ತಾಲೂಕಿನ ಕರ್ಕಿ ಮಠದಕೇರಿಯವರಾದ ಸತೀಶ ತಾಂಡೇಲ ಅವರು ಕಳೆದ 17 ವರ್ಷಗಳಿಂದ ಹೊನ್ನಾವರ ತಾಲೂಕು ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಟ್ಟಣ ಮತ್ತು ಗ್ರಾಮೀಣ ಭಾಗದ ಜನಜೀವನ ತೊಳಲಾಟಗಳು, ವಿವಿಧ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ, ಜನಪರ ವರದಿಗಳ ಮೂಲಕ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ.

ಜ.25ರಂದು ಹೊನ್ನಾವರದಲ್ಲಿ ನಡೆಯುವ ಪತ್ರಿಕಾ ಮಂಡಳಿ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net