

ಕಡೂರು: ಸೋಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಂ.ಸಿ.ಸತೀಶ್ ನಾಯ್ಕ ಅವಿರೋಧವಾಗಿ ಆಯ್ಕೆಯಾದರು.
ಮಂಗಳಾ ಶಶಿಧರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಗ್ರಾಪಂನಲ್ಲಿ ಚುನಾವಣೆ ನಡೆಯಿತು. ಸತೀಶ್ ನಾಯ್ಕ ಅವರಿಗೆ ಪ್ರತಿಸ್ಪರ್ಧಿಯಾಗಿ ರತ್ನಬಾಯಿ ನಾಮಪತ್ರ ಸಲ್ಲಿಸಿದರಾದರೂ ಕೊನೇ ಕ್ಷಣದಲ್ಲಿ ನಾಮಪತ್ರ ಹಿಂಪಡೆದರು. ಚುನಾವಣಾಧಿಕಾರಿಯಾಗಿ ಟಿ.ಆರ್.ರುದ್ರಪ್ಪ ಕಾರ್ಯ ನಿರ್ವಹಿಸಿದರು. ಗ್ರಾಪಂ ಸದಸ್ಯರಾದ ಲೀಲಾವತಿ, ಎಂ.ಜೆ.ಸಂತೋಷ್, ಎಸ್.ಜೆ.ಅರುಣ್, ಮಂಗಳಾ, ಲತಾ ದೇವರಾಜ್, ಬಿ.ಸಿ.ನಾಗರಾಜ್, ಎಸ್.ಪಿ.ಲಿಂಗರಾಜು, ಶೋಭಾರಾಣಿ, ಪಿಡಿಒ ತನುಜಾ, ಗಂಗಾಧರ್ ಸಣ್ಣಕ್ಕಿಕೊಪ್ಪಲು ಇತರರಿದ್ದರು.