ಬೆಳಗಾವಿಗೆ ನಾನೇ HOD, ನಮ್ಮಲ್ಲಿ ಯಾವುದೇ ಸಮಸ್ಯೆಗಳಿಲ್ಲ: ಸತೀಶ್​ ಜಾರಕಿಹೊಳಿ

Belgaum Politics
Published on

ಕೊಪ್ಪಳ: ಬೆಳಗಾವಿ ರಾಜಕಾರಣದಲ್ಲಿ ಎಲ್ಲವೂ ಸರಿಯಿದ್ದು, ನಮ್ಮಲ್ಲಿ ಯಾವುದೇ ಸಮಸ್ಯೆಗಳಿಲ್ಲ. ನಮ್ಮ ಆಂತರಿಕ ವಿಚಾರಗಳನ್ನು ಹೊರಗಡೆ ಹೇಳಬೇಡಿ ಎಂದು ಪಕ್ಷದ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್​ ಹೇಳಿದ್ದಾರೆಂದು ಸಚಿವ ಸತೀಶ್​ ಜಾರಕಿಹೊಳಿ ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಆನೆಗೊಂದಿಯಲ್ಲಿ ಈ ಕುರಿತು ಮಾತನಾಡಿದ ಸತೀಶ್​ ಜಾರಕಿಹೊಳಿ, ಬೆಳಗಾವಿ ರಾಜಕಾರಣದಲ್ಲಿ ಯಾವುದೇ ಸಮಸ್ಯೆ ಇಲ್ಲ. ದಲಿತ ಸಿಎಂ ವಿಚಾರದ ಬಗ್ಗೆ ಯಾವುದೇ ಚರ್ಚೆ ಇಲ್ಲ. ಅದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ರಾಜ್ಯದಲ್ಲಿ ಸದ್ಯ ಸಿಎಂ ಇದ್ದಾರೆ ಎಂದು ಹೇಳಿದ್ದಾರೆ.

Satish jarakiholi

ಬೆಳಗಾವಿ ರಾಜಕಾರಣದಲ್ಲಿ ಗದ್ದಲದ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಯಾರ ಮೇಲೆ ಸಿಟ್ಟಾಗಬೇಕು ಹೇಳಿ ಬೆಳಗಾವಿಯಲ್ಲಿ ನಾನೇ ಹೆಡ್ ಆಫ್ ದಿ ಡಿಪಾರ್ಟ್ಮೆಂಟ್ (HOD). ನಾನು ಯಾಕೆ ಯಾರ ಮೇಲೆ ಸಿಟ್ಟಾಗಲಿ, ನಾನೇ ಎಲ್ಲಾ ಸರಿ ಮಾಡುತ್ತೇನೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಸತೀಶ್ ಜಾರಕಿಹೊಳಿ ಕರ್ನಾಟಕದ ಏಕನಾಥ್ ಶಿಂಧೆ ಎಂಬ ಮಾತಿಗೆ ಪ್ರತಿಕ್ರಿಯಿಸಿ, ಆ ರೀತಿ ಯಾವುದೂ ಇಲ್ಲ. ಇಲ್ಲಿ ಒಟ್ಟಾಗಿ ಇದ್ದೀವಿ. ಅಂತಹ ಪ್ರಶ್ನೆ ಉದ್ಭವ ಆಗುವುದಿಲ್ಲ. ನಿಮಗೆ ಹಾಗೆ ಅನ್ನಿಸಿರಬಹುದು, ನಮಗೆ ಹಾಗೆ ಅನಿಸಿಲ್ಲ. ಪರಮೇಶ್ವರ್ ಮನೆಗೆ ಊಟಕ್ಕೆ ಹೋಗಿದ್ದು ಅಷ್ಟೇ ಅಲ್ಲಿ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ. ನಮ್ಮ ಆಂತರಿಕ ವಿಚಾರಗಳನ್ನ ಹೊರಗಡೆ ಹೇಳಬೇಡಿ ಅಂತ ಡಿ.ಕೆ.ಶಿವಕುಮಾರ್ ಹೇಳಿರುವುದಾಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net