ಸತೀಶ್ ಜಾರಕಿಹೊಳಿ ಇತಿಹಾಸ ಓದಿಲ್ಲ

c9ee8dd7-c239-4695-bd17-93ecad6b9befFFFF
Published on

ಚಿತ್ರದುರ್ಗ: ಅವರು ಇತಿಹಾಸ ಓದಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್,ಹಿಂದು ಪದದ ಕುರಿತು ಕೆಪಿಸಿಸಿ ಅಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದರು.

ಸಿಂಧೂ ನದಿಯಿಂದ ಹಿಂದು ಪದ ಬಂದಿದೆ. ಸತೀಶ್ ಬಹುಶಃ ಇತಿಹಾಸ ಓದಿಲ್ಲವೆಂದು ಅನಿಸುತ್ತಿದೆ. ಅವರ ಹೇಳಿಕೆಯನ್ನು ಜನರು ಸಹಿಸುವುದಿಲ್ಲ,ಅವರಿಗೆ ತಕ್ಕ ಉತ್ತರ ಕೊಡುತ್ತಾರೆ. ಶಾಲಾ ಸರ್ಟಿಫಿಕೇಟ್‌ಗಳ ಲ್ಲಿ ಹಿಂದು ಎಂದು ಯಾಕಿದೆ? ಹಿಂದು ಧರ್ಮ,ಹಿಂದುಗಳ ಬಗ್ಗೆ ಅಸಭ್ಯ,ಹಗುರವಾಗಿ ಮಾತಾಡಬಾರದು.

ವಾಲ್ಮೀಕಿ ರಾಮಾಯಣ ಬರೆದಿದ್ದಾರೆ,ರಾಮ ಯಾರು? ಹೇಳಿಕೆ ನೀಡುವಾಗ ನಾಲಿಗೆ ಮೇಲೆ ಹಿಡಿತ ಇರಬೇಕು. ಬಿಜೆಪಿ ಅಧಿಕಾರಕ್ಕೆ ಬಂದರೆ ಬಡವರ ಬದುಕು ಕಷ್ಟವಾಗುತ್ತದೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ಟೀಕಿಸಿ,ಸಿದ್ಧರಾಮಯ್ಯ ಬಡವರಿಗೆ ಊಟ ಹಾಕುತ್ತಿದ್ದಾರೆಯೇ? ಅಥವಾ ಸಿದ್ಧರಾಮಯ್ಯರ ಮನೆಗೆ ಜನರು ಹೋಗಿ ಊಟ ಕೇಳುತ್ತಿದ್ದಾರೆಯೇ?.

ಕೋವಿಡ್ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು,ಉಚಿತ ಧಾನ್ಯ ವಿತರಣೆ ಯೋಜನೆ ಜಾರಿಗೊಳಿಸಿದರು. ಕೋವಿಡ್ ಸಂದರ್ಭ ದಲ್ಲಿ ಕಾಂಗ್ರೆಸ್ ಏನಾದರೂ ಅಧಿಕಾರದಲ್ಲಿದಿದ್ದರೆ ದೇಶ ಮಾರಾಟವಾಗಿರುತ್ತಿತ್ತು. ವೇಷ ಮರೆಸಿಕೊಂಡು ಬಿಜೆಪಿ ಜನ ಸಂಕಲ್ಪ ಯಾತ್ರೆಯ ಲ್ಲಿ ಸಿದ್ದರಾಮಯ್ಯ ಭಾಗವಹಿಸಲಿ. ಯಾತ್ರೆ ಯಶಸ್ಸು ಸಹಿಸದೆ ಟೀಕಿಸುತ್ತಿದ್ದಾರೆ ಎಂದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net