ಅಧಿಕಾರಾವಧಿಯಲ್ಲಿ ಉತ್ತಮ ಕೆಲಸ ಮಾಡಿದ ತೃಪ್ತಿಯಿದೆ

19 ckm 2 Varasiddhi Venugopal
ಸುದ್ದಿಗೋಷ್ಟಿಯಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿದರು.
Published on

ಚಿಕ್ಕಮಗಳೂರು: ಅಗ್ನಿಪರೀಕ್ಷೆ, ಒತ್ತಡ ಹಾಗೂ ಅನೇಕ ಸಂಕಷ್ಟಗಳ ನಡುವೆಯೂ ಕಳೆದ ಎರಡೂವರೆ ವರ್ಷಗಳ ಅವಧಿಯ ಅಧಿಕಾರದಲ್ಲಿ ನಗರಸಭೆ ಇತಿಹಾಸದಲ್ಲಿ ಭ್ರಷ್ಟ ರಹಿತ ಸ್ವಚ್ಛ ಹಾಗೂ ದಕ್ಷ ಆಡಳಿತ ನೀಡಿರುವುದು ತೃಪ್ತಿ ತಂದಿದೆ ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಿಳಿಸಿದರು.

ನಗರದ ನಗರಸಭೆ ಅಧ್ಯಕ್ಷ ಕಚೇರಿ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನನ್ನ ಆಡಳಿತ ಅವಧಿಯಲ್ಲಿ ಎಲ್ಲ ವಾರ್ಡ್ಗಳ ಸ್ವಚ್ಛತೆಗೆ ಆದ್ಯತೆ ನೀಡಿದ್ದರಿಂದ ಸ್ವಚ್ಛತೆಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ನಾಗರಿಕರ ಪ್ರಶಂಸೆಗೆ ಒಳಗಾಗಿದ್ದು, ಇದರಿಂದ ಪ್ರಭಾವಿತರಾಗಿ ನಗರಸಭೆ ಆಯುಕ್ತರು, ನಗರಸಭೆ ಸಿಬ್ಬಂದಿಯೊAದಿಗೆ ವಾರಕ್ಕೊಮ್ಮೆ ಎಲ್ಲ ವಾರ್ಡ್ಗಳ ಸ್ವಚ್ಛತೆ ಮಾಡಿರುತ್ತಾರೆ. ಇದಕ್ಕೆ ವಾರ್ಡ್ ಸದಸ್ಯರು, ನಾಗರಿಕರು ಕೈಜೋಡಿಸಿದ್ದಾರೆ ಎಂದು ತಿಳಿಸಿದರು.
ನನ್ನ ಅವಧಿಯಲ್ಲಿ ಕಂದಾಯ ವಸೂಲಿಗೆ ಡಿಜಿಟಲ್ ವ್ಯವಸ್ಥೆ, ಆನ್ಲೆÊನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ವೈರ್‌ಲೆಸ್ ಪ್ರಿಂಟರ್ ಮೂಲಕ ಮನೆಮನೆಗೆ ತೆರಳಿ ಯುಪಿಐ ಪೇಮೆಂಟ್ ಮಾಡಲಾಗುತ್ತಿರುವುದರಿಂದ ಕಂದಾಯ ಕಟ್ಟಿದವರಿಗೆ ಮೋಸ ಆಗುವ ಪ್ರಶ್ನೆಯೇ ಇಲ್ಲವಾಗಿದೆ. ಇಂಥ ವಿನೂತನ ತೆರಿಗೆ ಪಾವತಿ ವ್ಯವಸ್ಥೆ ಕಾರಣದಿಂದ ಚಿಕ್ಕಮಗಳೂರು ನಗರಸಭೆ ಕಂದಾಯ ವಸೂಲಾತಿಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದರು.
ನಗರದಲ್ಲಿ ಬೃಹತ್ ಕಟ್ಟಡಗಳು ಸೇರಿದಂತೆ ಹಲವಾರು ಶಾಶ್ವತ ಕಾಮಗಾರಿ ಮಾಡಲಾಗಿದೆ. ಮೊದಲ ಬಾರಿಗೆ ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ನಗರಸಭೆಯ ಆವರಣದಲ್ಲಿ ೩.೫೦ ಕೋಟಿ ರೂ ವೆಚ್ಚದ ಪುಡ್‌ಕೋರ್ಟ್ ಕಾಮಗಾರಿ ನಡೆಯುತ್ತಿದ್ದು, ಕೆಲಸ ಅಂತಿಮ ಹಂತದಲ್ಲಿದೆ. ಸಾರ್ವಜನಿಕ ಸೇವೆಗೆ ಸಧ್ಯವೇ ಮುಕ್ತಗೊಳ್ಳಲಿದೆ ಎಂದು ತಿಳಿಸಿದರು.
ಕಚೇರಿಯಲ್ಲಿ ಇದ್ದ ಒಂದು ಕಂಪ್ಯೂಟರ್ ಬದಲಿಗೆ ಇಂದು ೨೦ ಕಂಪ್ಯೂಟರ್ ಅಳವಡಿಸಿ ಜನರ ಕಷ್ಟಕ್ಕೆ ಕೂಡಲೇ ಸ್ಪಂದಿಸಲಾಗುತ್ತಿದೆ. ಅಲ್ಲದೆ ವಾಕ್‌ಪಾಥ್ ವಿದ್ಯುದ್ದೀಕರಣ, ಮ್ಯೂಸಿಕ್ ಪೌಟೇನ್, ಮಹಾದ್ವಾರ ಹಾಗೂ ರಾಜ್ಯದಲ್ಲೇ ಮೊದಲ ಬಾರಿಗೆ ನಗರಸಭೆ ಆವರಣದಲ್ಲಿ ವ್ಯಾಯಾಮ ಶಾಲೆ ನಿರ್ಮಾಣ ಮಾಡಲಾಗಿದೆ ಎಂದರು.
ನಗರದ ಹಲವೆಡೆ ಶುದ್ಧಗಂಗಾ ಕುಡಿಯುವ ನೀರಿನ ಘಟಕ ಜನತೆಯ ಸೇವೆಗೆ ನೀಡಲಾಗಿದೆ. ಆಜಾದ್ ವೃತದಲ್ಲಿ ಮೇಕ್ ಇನ್ ಇಂಡಿಯಾ ಲಾಂಛನ ಪ್ರವಾಸಿಗರು ಮತ್ತು ಸ್ಥಳೀಯರನ್ನು ಸೆಳೆಯುತ್ತಿದೆ ಎಂದು ಹೇಳಿದರು.
ಸಾರ್ವಜನಿಕ ದೂರಿನ ಮೇರೆಗೆ ಭೂ ಮಾಫಿಯಾದವರಿಂದ ಒತ್ತುವರಿಯಾಗಿದ್ದ ೩೦ ಕೋಟಿ ರೂ. ಗಳ ೬೦ಅಡಿ ರಸ್ತೆಯಲ್ಲಿ ಇರುವ ಸರ್ಕಾರಿ ಜಾಗದ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಆ ಜಾಗದಲ್ಲಿ ಕನವನ್ನು ಡಂಪ್ಪಿAಗ್ ಮಾಡಿ ಬೇರೆ ವಾಹನಗಳಿಗೆ ತುಂಬಿಸಿ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ನಗರದ ಎಲ್ಲೆಂದರಲ್ಲಿ ಕಸ ಸುರಿದು ರೀ ಲೋಡ್ ಮಾಡುವುದನ್ನು ತಪ್ಪಿಸಿರುವುದಾಗಿ ತಿಳಿಸಿದರು.
ನಗರದಲ್ಲಿ ೪೦ ವರ್ಷದ ಅವಧಿಯಲ್ಲಿ ೪೪ ಗೋಹತ್ಯಾ ಕೇಂದ್ರಗಳು ತಲೆ ಎತ್ತಿದ್ದು, ಅವುಗಳ ಮೇಲೆ ಸಿಬ್ಬಂದಿಯೊAದಿಗೆ ದಾಳಿ ಮಾಡಿ ಮುಚ್ಚಿಸಿ ಸಾವಿರಾರು ಗೋಹತ್ಯೆ ತಡೆಯಲಾಗಿದೆ. ತರೀಕೆರೆ ರಸ್ತೆ, ಎಐಟಿ ವೃತ, ನಗರಸಭೆ ಆವರಣ, ಎಂ.ಜಿ ರಸ್ತೆ, ಅಟಲ್ ವಾಣಿಜ್ಯ ಸಂಕೀರ್ಣ ಸೇರಿದಂತೆ ನಗರದ ಹಲವೆಡೆ ಸುಸರ್ಜಿತ ಶೌಚಗೃಹ ನಿರ್ಮಾಣ, ನಗರೋತ್ಥಾನ ಯೋಜನೆ ಅಡಿಯಲ್ಲಿ ೩೪ ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ, ಡೆಕ್‌ಸ್ಲಾಬ್, ಹಳೆಯ ವಾರ್ಡ್ಗಳಲ್ಲಿ ಹಾಳಾಗಿದ್ದ ಒಳಚರಂಡಿ ಬದಲು ಹೊಸ ಪೈಪ್‌ಲೈನ್, ಮ್ಯಾನ್‌ಹೋಲ್ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಕಳೆದ ವರ್ಷ ನಡೆದ ಯಶಸ್ವಿ ಚಿಕ್ಕಮಗಳೂರು ಹಬ್ಬ ಉತ್ಸವದಲ್ಲಿ ಉತ್ಪತ್ತಿಯಾದ ಕಸವನ್ನು ಪೌರ ಕಾರ್ಮಿಕರು ರಾತ್ರೋರಾತ್ರಿ ಸ್ವಚ್ಛಗೊಳಿಸಿದ ಬಗ್ಗೆ ಮಹಾರಾಷ್ಟçದ ಮಾಜಿ ಮುಖ್ಯಮಂತ್ರಿ, ಹಾಲಿ ಉಪ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ಪ್ರಶಂಸೆ ವ್ಯಕ್ತಪಡಿಸಿದ್ದರು. ನನ್ನ ಆಡಳಿತ ಅವಧಿಯಲ್ಲಿ ನಾಗರಿಕರ ಸಮಸ್ಯೆಗೆ ಕೂಡಲೇ ಸ್ಪಂದಿಸುವ ಅಧ್ಯಕ್ಷ ಎನಿಸಿಕೊಂಡು ಹಾಗೂ ಇ-ಖಾತೆ ಮಾಡಿಸಿ ಕೊಟ್ಟವರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಖುಷಿ ತಂದಿದೆ. ನಾಗರಿಕರು ಮತ್ತು ಎಂಪಿ, ಎಂಎಲ್‌ಎ, ಎಂಎಲ್‌ಸಿ, ಪೌರಾಯುಕ್ತರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಸಹ ಸದಸ್ಯರಿಗೆ ಸದಾ ಕೃತಜ್ಞ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net