ಪರರ ಸಂಕಷ್ಟಗಳಿಗೆ ಸ್ಪಂದಿಸಿದರೆ ಸಂತೃಪ್ತಿ

Btw_Satisfied
Published on

ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳ ಆಶ್ರಯದಲ್ಲಿ ಕ್ರಿಸ್‌ಮಸ್ ಸಂಭ್ರಮ ಕಾರ್ಯಕ್ರಮ ಬಿ.ಸಿ.ರೋಡ್‌ನ ಲಯನ್ಸ್ ಕ್ಲಬ್‌ನಲ್ಲಿ ಮಂಗಳವಾರ ಸಂಭ್ರಮದಿಂದ ನಡೆಯಿತು.

ತೊಡಂಬಿಲ ಚರ್ಚ್ ಧರ್ಮಗುರು ಆ್ಯಂಟೋನಿ ಲೋಬೊ ಉದ್ಘಾಟಿಸಿ ಮಾತನಾಡಿ, ಪರರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಜೀವನದಲ್ಲಿ ಸಂತೃಪ್ತಿ ಕಾಣಬಹುದು ಎಂದರು.

ಜಿಲ್ಲಾ ಕ್ರಿಸ್‌ಮಸ್ ಪ್ರಧಾನ ಸಂಯೋಜಕ ಅರುಣ್ ಪೀಟರ್ ಪಿಂಟೋ ಶುಭ ಹಾರೈಸಿದರು. ವಾಲ್ಟರ್ ನೊರಾನ್ಹಾ ಮತ್ತು ಡೊನಾಲ್ಡ್ ಬಂಟ್ವಾಳ್ ಅತಿಥಿಗಳ ಪರಿಚಯ ಮಾಡಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಗೋಳ್ತಮಜಲು ಮೊಹಮ್ಮದ ಹನೀಫ್ ಅವರನ್ನು ಅಭಿನಂದಿಸಲಾಯಿತು.

ಮಾಜಿ ಗವರ್ನರ್ ವಸಂತ ಕುಮಾರ್ ಶೆಟ್ಟಿ ಶುಭಾಶಂಸನೆಗೈದರು. ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು. ಕ್ರಿಸ್‌ಮಸ್ ಆಚರಣೆಯಲ್ಲಿ ಸೇವಾ ಕಾರ್ಯಕ್ರಮವಾಗಿ ಭಂಡಾರಿಬೆಟ್ಟು ನಿವಾಸಿಯೋರ್ವರಿಗೆ ವೈದ್ಯಕೀಯ ವೆಚ್ಚಕ್ಕಾಗಿ 10 ಸಾವಿರ ರೂ. ಚೆಕ್ ಹಸ್ತಾಂತರಿಸಲಾಯಿತು. ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಕ್ರಿಸ್‌ಮಸ್ ಸಂಭ್ರಮದ ಆತಿಥ್ಯ ವಹಿಸಿದ ಡೊನಾಲ್ಡ್ ಬಂಟ್ವಾಳ್, ವಾಲ್ಟರ್ ನೊರಾನ್ಹಾ, ಪಿ.ಜೆ.ರೋಡ್ರಿಗೆಸ್, ಹೆನ್ರಿ ಪಿರೇರಾ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಕಾರ್ಯದರ್ಶಿ ದೇವಿಕಾ ದಾಮೋದರ್, ಕೋಶಾಧಿಕಾರಿ ದೇವಪ್ಪ ಪೂಜಾರಿ ಉಪಸ್ಥಿತರಿದ್ದರು. ಪಿ.ಜೆ.ರಾಡ್ರಿಗೆಸ್ ವಂದಿಸಿದರು. ಲಿಯೋ ಮತ್ತು ಲಯನ್ಸ್ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net