ಉಳ್ಳಾಲ: ಸಾಂತ್ಯಗುತ್ತು ಕಿನ್ಯ ಬೆಳರೆಂಗಿ ಮಲರಾಯ, ಧೂಮಾವತಿ ಬಂಟ ದೈವಗಳ ಧರ್ಮನೇಮ ಶುಕ್ರವಾರ ಆರಂಭಗೊಂಡಿದ್ದು 6ರವರೆಗೆ ನಡೆಯಲಿದೆ.
ಸಾಂತ್ಯಗುತ್ತುವಿನಲ್ಲಿ ನಾಲ್ಕು ದಶಕಗಳ ಬಳಿಕ ಕಿನ್ಯಾ ಬೆಳರೆಂಗಿ ಶ್ರೀ ಮಲರಾಯ, ಧೂಮಾವತಿ ಬಂಟ ದೈವಗಳಿಗೆ ನೇಮ ನಡೆಯುತ್ತಿದ್ದು, 6ರಂದು ಶಿವರಾಮ್ ಶೆಟ್ಟಿ ಅವರಿಗೆ ಸಾಂತ್ಯಗುತ್ತಿನ ಅಧಿಕಾರದ ಗಡಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಸಾಂತ್ಯಗುತ್ತು ಚಾವಡಿಯಲ್ಲಿ ವೆಂಕಟರಮಣ ದೇವರಿಗೆ ಹರಿಸೇವೆ ಮತ್ತು ಮುಡಿಪು ನಡೆಯಿತು. 5ರಂದು ಮಧ್ಯಾಹ್ನ 12.30ಕ್ಕೆ ಚಪ್ಪರ ಮುಹೂರ್ತ, ಅನ್ನಸಂತರ್ಪಣೆ, 2ರಿಂದ ಭಜನಾ ಕಾರ್ಯಕ್ರಮ, 3ರಿಂದ ‘ತೌಳವ ಸಂಸ್ಕೃತಿಯಲ್ಲಿ ತುಳುನಾಡ ಗುತ್ತುಗಳು’ ಎಂಬ ವಿಷಯದಲ್ಲಿ ಗೋಷ್ಠಿ, ಸಂಜೆ 5 ಗಂಟೆಗೆ ದೈವಸ್ಥಾನಕ್ಕೆ ಸಂಬಂಧಪಟ್ಟ ಸ್ಥಳ ವಂದಿಗರಿಗೆ ಗೌರವ ಸಮರ್ಪಣೆ, ಸಂಜೆ 6ಕ್ಕೆ ನೃತ್ಯ ಭಾರತಿ ತಂಡದವರಿಂದ ನವರಸ ರಾಮ ಹಾಗೂ ಕೃಷ್ಣಾಂತರಂಗ ನೃತ್ಯ ರೂಪಕ, ರಾತ್ರಿ 9ಕ್ಕೆ ಸಾಂತ್ಯಗುತ್ತು ಕುಟುಂಬ ಸಮ್ಮಿಲನ ನಡೆಯಲಿದೆ.
6ರಂದು ಬೆಳಿಗ್ಗೆ 9ಕ್ಕೆ ಶ್ರೀ ಮಲರಾಯ ದೈವಕ್ಕೆ ನೇಮ, ಮಧ್ಯಾಹ್ನ 3 ಗಂಟೆಗೆ ಪಟ್ಲ ಸತೀಶ್ ಶೆಟ್ಟಿ ಮತ್ತು ಬಳಗದವರಿಂದ ಯಕ್ಷಗಾನ ಹಾಸ್ಯ ವೈಭವ, ರಾತ್ರಿ 8ಕ್ಕೆ ಶ್ರೀ ಧೂಮಾವತಿ ಬಂಟ ದೈವಗಳಿಗೆ ಧರ್ಮನೇಮ ನಡೆಯಲಿದೆ.