ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಹಿಂದುಗಳಿಗೆ ಯಾತನೆ - ಸತೀಶ್ ಕುಂಪಲ

kumpaa-620x369
Published on


ಮಂಗಳೂರು : ಹಿಂದು ಧರ್ಮೀಯರು ಪೂಜಿಸುವ ಗಣೇಶೋತ್ಸವದ ಮೆರವಣಿಗೆ ಮೇಲೆ ನಾಗಮಂಗಲದಲ್ಲಿ ಮತಾಂಧರು ಕಲ್ಲು ತೂರಾಟ ಮಾಡುವುದರ ಮೂಲಕ ದುಷ್ಕೃತ್ಯ ಮೆರೆದಿದ್ದಾರೆ .ಕಾಂಗ್ರೆಸ್ ಸರ್ಕಾರ ಬಂದ ಕರ್ಮಕ್ಕೆ ಹಿಂದುಗಳು ಯಾತನೆ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ಇಂತಹ ಪ್ರಕರಣಗಳು ಪದೇಪದೇ ಮರುಕಳಿಸಲು ಕಾಂಗ್ರೆಸ್ ಸರ್ಕಾರ ಕ್ರಿಮಿನನ್‌ಗಳ ಬಗ್ಗೆ ತೋರುತ್ತಿರುವ ಮೃದು ಧೋರಣೆಯೇ ಪ್ರಮುಖ ಕಾರಣ ಎಂದು ದ.ಕ.ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸತೀಶ್ ಕುಂಪಲ ಆರೋಪಿಸಿ ಘಟನೆಯನ್ನು ಉಗ್ರವಾಗಿ ಖಂಡಿಸಿದ್ದಾರೆ.
ಹಿಂದುಗಳನ್ನು ಗುರಿಯಾಗಿಸಿ ಕಲ್ಲು ತೂರಾಟ ನಡೆಸಿರುವುದು ಪೂರ್ವಯೋಜಿತ ಕೃತ್ಯ . ಪೊಲೀಸ್ ಇಲಾಖೆ ಸರ್ಕಾರದ ಕೈಗೊಂಬೆಯಂತೆ ಕಾರ್ಯ ನಿರ್ವಹಿಸುತ್ತಿದೆ. ನಾಗಮಂಗಲ ಪರಿಸರದಲ್ಲಿ ಗಲಭೆ ನಡೆಸಿದ ಕಿಡಿಗೇಡಿಗಳನ್ನು ಬಂಧಿಸುವ ಬದಲಿಗೆ ಸ್ಥಳೀಯ ಹಿಂದು ಮನೆಯೊಳಗೆ ು ನುಗ್ಗಿ ಅಮಾಯಕ ಯುವಕರನ್ನು ಠಾಣೆಗೆ ಕರೆದೊಯ್ಯುವ ಮೂಲಕ ಗಾಯದ ಮೇಲೆ ಬರೆ ಎಳೆದಿದ್ದಾರೆ. ಗೃಹ ಮಂತ್ರಿಗಳು 52 ಜನರ ಬಂಧನವಾಗಿದೆ ಎಂದರೆ ಸಾಲದು . ದುಷ್ಕರ್ಮಿಗಳಿಗೆ ಕಠಿನ ಶಿಕ್ಷೆಯಾಗ ಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net