

ಮಂಗಳೂರು : ದೇಶಕ್ಕೆ ಸಂವಿಧಾನ ನೀಡಿದ ಮಹಾಪುರುಷ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು 1952ರ ಸಾರ್ವತ್ರಿಕ
ಚುನಾವಣೆ ಮತ್ತು 1954ರಲ್ಲಿ ನಡೆದ ಉಪಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್. ಇದನ್ನು ದೇಶದ ಗೃಹ ಸಚಿವ
ಅಮಿತ್ ಶಾ ಅವರು ಸದನದಲ್ಲಿ ಪ್ರಸ್ತಾಪಿಸಿದ್ದು ಕಾಂಗ್ರೆಸಿಗರಿಗೆ ಇರಿಸುಮುರುಸು ತಂದಿದೆ. ಸಂವಿಧಾನದ ಹೆಸರಲ್ಲಿ ರಾಜಕೀಯ ಬೇಳೆ ಬೇಯಿಸಲು ಹೊರಟಿರುವ ಕಾಂಗ್ರೆಸಿಗರ ಬಂಡವಾಳ ದೇಶದ ಜನರಿಗೆ ತಿಳಿದಿದೆ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.
ನೆಹರು ಮತ್ತು ಕಾಂಗ್ರೆಸಿಗರು ಅಂಬೇಡ್ಕರ್ ಅವರಿಗೆ ಯಾವ ರೀತಿ ಅನ್ಯಾಯ ಎಸಗಿದ್ದಾರೆ, ಅವಮಾನಿಸಿದ್ದಾರೆ ಎನ್ನುವುದನ್ನು ರಾಹುಲ್ ಗಾಂಧಿ ಮರೆತಿದ್ದಾರಾ ? ದೇಶದಲ್ಲಿ ನೆಹರು, ಇಂದಿರಾ, ರಾಜೀವ್ ಹೆಸರಲ್ಲಿ ಸ್ಮಾರಕ, ಆಸ್ಪತ್ರೆ, ರಸ್ತೆ, ವಿಮಾನ ನಿಲ್ದಾಣಗಳು ಇದ್ದರೂ ಸಂವಿಧಾನ ಪುರುಷ ಅಂಬೇಡ್ಕರ ಹೆಸರಲ್ಲಿ ಕಾಂಗ್ರೆಸ್ ಸ್ಮಾರಕ ನಿರ್ಮಿಸಿಲ್ಲ. ಈಗ ನರೇಂದ್ರ ಮೋದಿ ಅವರು
ಅಂಬೇಡ್ಕರ್ ವರಿಗೆ ಸಂಬಂದಿಸಿದ ಜಾಗಗಳನ್ನು ಪಂಚತೀರ್ಥಗಳಾಗಿ ಅಭಿವೃದ್ಧಿ ಪಡಿಸಿ ಗೌರವ ಸಲ್ಲಿಸಿದ್ದಾರೆ ಎಂದು ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.