ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಗೆ ಆಗ್ರಹ

kumpaa-620x369
Published on


ಮಂಗಳೂರು : ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ನಗದು ನೀಡದೆ ಐದು ತಿಂಗಳಾಗಿದೆ. ಗೃಹಲಕ್ಷ್ಮಿ ಯೋಜನೆಯ ಮಾಸಿಕ ಹಣ ಫಲಾನುಭವಿಗಳ ಖಾತೆಗೆ ಪಾವತಿಸದೆ ಮೂರು ತಿಂಗಳಾಗಿದೆ. ಸರ್ಕಾರ ಕೂಡಲೇ ಗ್ಯಾರಂಟಿ ಯೋಜನೆಯ
ಫಲಾನುಭವಿಗಳಿಗೆ ಹಣ ಪಾವತಿಸಬೇಕೆಂದು ಗೃಹಲಕ್ಷ್ಮಿ ಯೋಜನೆಯ ಹಣ
ಬಿಡುಗಡೆಗೆ ಬಿಜೆಪಿ ಆಗ್ರಹಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಆಮಿಷ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಈಗ ಯು ಟರ್ನ್
ಹೊಡೆಯುವ ಲಕ್ಷಣ ತೋರಿಸುತ್ತಿದೆ. ಹೆಣ್ಣು ಮಕ್ಕಳ ಖಾತೆಗೆ ಪ್ರತಿ ತಿಂಗಳು 2000 ರೂ., ಅನ್ನಭಾಗ್ಯ, ಯುವನಿಧಿ ಎಂದು ಚುನಾವಣಾ ಪ್ರಚಾರದಲ್ಲಿ ಘೋಷಣೆ ಕೂಗಿದ ಸಿದ್ದರಾಮಯ್ಯ ಈಗ ಯೋಜನೆ ಜಾರಿಗೆ ಹಣದ ಕೊರತೆ ಇದೆ ಎಂದು ಜಾರಿಗೊಳ್ಳುತ್ತಿದ್ದಾರೆ . ವಿದ್ಯುತ್ ದರ, ಬಸ್ಸು ಪ್ರಯಾಣ ದರ ಸಹಿತ ಎಲ್ಲ ದರ ಏರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಜನರ ಜೇಬು ಲೂಟಿ ಮಾಡಲು ಹೊರಟಿದೆ ಎಂದು ಅವರು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net