ದೇಶದ ಮಾನ ಹರಾಜು ಮಾಡುತ್ತಿರುವ ರಾಹುಲ್ ಗಾಂಧಿ : ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಆರೋಪ

kumpaa-620x369
Published on


ಮಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೇರಿಕಾದ ನೆಲದಲ್ಲಿ ನಿಂತು ಭಾರತ ನಿಷ್ಪ್ರಯೋಜಕ ಎನ್ನುವ ರೀತಿಯಲ್ಲಿ ಮಾತನಾಡುತ್ತಾ ದೇಶದ ಮಾನ ಹರಾಜು ಮಾಡುತ್ತಿದ್ದಾರೆ . ರಾಹುಲ್ ಗಾಂಧಿ ಚೀನಾದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದು, ದೇಶದ ಚುಕ್ಕಾಣಿ ಕಾಂಗ್ರೆಸ್ ಕೈ ಸೇರಿದರೆ ಯಾವ ರೀತಿ ಅರಾಜಕತೆ ದೇಶದಲ್ಲಿ ಸೃಷ್ಟಿಯಾಗ ಬಹುದು ಎನ್ನುವುದನ್ನು ಸೂಚಿಸುತ್ತದೆ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.
ಭಾರತದಲ್ಲಿ ನಿರುದ್ಯೋಗವಿದೆ. ಚೀನಾದಲ್ಲಿ ಭಾರತಕ್ಕಿಂತಲೂ ಉತ್ಪಾದನೆ ಅಧಿಕವಿದೆ. ಚೀನಾ ಭಾರತದ 4,000 ಕ್ಕೂ ಅಧಿಕ ಚದರ ಮೀಟರ್ ಜಾಗ ಆಕ್ರಮಿಸಿದೆ ಎಂದು ಹೇಳುವ ರಾಹುಲ್ ಗಾಂಧಿ ಇದಕ್ಕೆಲ್ಲಾ ಈ ಹಿಂದೆ ದೇಶ ಆಳಿದ ಕಾಂಗ್ರೆಸ್ ಕಾರಣ ಎನ್ನುವುದನ್ನು ಮರೆತಿದ್ದಾರೆ.
ದೇಶವನ್ನು ಜಾತಿ ಆಧಾರದಲ್ಲಿ ಛಿದ್ರಗೊಳಿಸಿ ಅಧಿಕಾರ ಪಡೆಯುವ ಕಾಂಗ್ರೆಸ್‌ನ ಕುತಂತ್ರಕ್ಕೆ ಪೂರ್ಣ ಅಂತ್ಯ ಹಾಕ ಬೇಕಿರುವುದು ಅವಶ್ಯವಾಗಿದೆ ಎಂದು ಕುಂಪಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net