ಭಯದ ವಾತಾವರಣ ಸೃಷ್ಟಿಸಲು ಮತಾಂಧರ ಯತ್ನ -ದ.ಕ.ಜಿಲ್ಲಾ ಬಿಜೆಪಿ ಆಧ್ಯಕ್ಷ ಸತೀಶ್ ಕುಂಪಲ ಆರೋಪ

kumpaa-620x369
Published on



ಮಂಗಳೂರು : ಬೋಳಿಯಾರ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಚೂರಿ ಇರಿದು ಹತ್ಯೆಗೆ ಯತ್ನಿಸಿರುವುದನ್ನು ದ.ಕ.ಜಿಲ್ಲಾ ಬಿಜೆಪಿ ಆಧ್ಯಕ್ಷ ಸತೀಶ್ ಕುಂಪಲ ಖಂಡಿಸಿದ್ದಾರೆ.
ಇಂತಹ ಘಟನೆಗಳು ಪದೇ ಪದೇ ನಡೆಯಲು ಕಾಂಗ್ರೆಸ್ ಸರ್ಕಾರವೇ ಕಾರಣ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ದಾಳಿ ನಡೆಸಿ ಭಯದ ವಾತಾವರಣ ನಿರ್ಮಾಣ ಮಾಡಿದಂತೆಯೇ ದ.ಕ.ಜಿಲ್ಲೆಯಲ್ಲಿಯೂ ಮಾಡುವ ಹುನ್ನಾರ ಇದರ ಹಿಂದಿದೆ ಎಂದು ಅವರು ಆರೋಪಿಸಿದ್ದಾರೆ.
ಕೋಮು ಸೂಕ್ಷ್ಮ ಪ್ರದೇಶ ಉಳ್ಳಾಲ ಬಿಜೆಪಿ ಸರ್ಕಾರದ ಆವಧಿಯಲ್ಲಿ ಶಾಂತಿಯುತವಾಗಿ ಇತ್ತು. ಆದರೆ ಕಾಂಗ್ರೆಸ್ ಆಡಳಿತ ಬಂದ
ಮೇಲೆ ಮತಾಂಧ ಶಕ್ತಿಗಳು ವಿಜೃಂಭಿಸಲು ಆರಂಭಿಸಿವೆ. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಉಳ್ಳಾಲದಲ್ಲಿ ಅಮಾಯಕ ಹಿಂದು ಯುವಕರ ಮೇಲೆ ಚೂರಿ ಇರಿತಗಳು ಹಲವಾರು ಬಾರಿ ಆಗಿರುತ್ತದೆ. ಮತಾಂಧರಿಗೆ ಕಾಂಗ್ರೆಸ್ ಅಭಯ ಹಸ್ತ ಇರುವುದು ಗೋಚರಿಸುತ್ತದೆ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಸತೀಶ್ ಕುಂಪಲ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
........................

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net