ಸಾತೇರಿ&ಕೇಳಬಾಯ ದೇವಾಲಯದ ಲೋಕಾರ್ಪಣೆ

7Kanapur2
Published on

ಖಾನಾಪುರ: ತಾಲೂಕಿನ ಚಿಕಲೆ ಗ್ರಾಮದಲ್ಲಿ ಗ್ರಾಮಸ್ಥರೇ ಸಂಟಿತರಾಗಿ ದೇಣಿಗೆ ಸಂಗ್ರಹಿಸಿ 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸಾತೇರಿ&ಕೇಳಬಾಯ ದೇವಾಲಯದ ಲೋಕಾರ್ಪಣೆ ಮೇ 7ರಿಂದ ಆರಂಭವಾಗಿದ್ದು, ಮೇ 10ರ ವರೆಗೆ ಜರುಗಲಿದೆ. ಗ್ರಾಮಸ್ಥರ ದೇಣಿಗೆ 1.50 ಕೋಟಿ ರೂ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರಿಂದ 1.50 ಲ ರೂ. ಹಾಗೂ ಶಾಸಕ ವಿಠ್ಠಲ ಹಲಗೇಕರ ಅವರ 5 ಲ ರೂ.ಅನುದಾನದಲ್ಲಿ ದೇವಾಲಯ ನಿರ್ಮಾಣಗೊಂಡಿದೆ. ಗೋವಾ ಸಿಎಂ ಪ್ರಮೋದ ಸಾವಂತ, ಬಿಜೆಪಿ ಮಹಿಳಾ ಮೋರ್ಚಾ ಗೋವಾ ಪ್ರಭಾರಿ ಸುಲಣಾ ಸಾವಂತ ದೇವಾಲಯ ಲೋಕಾರ್ಪಣೆಗೊಳಿಸುವರು. ಶಾಸಕ ವಿಠ್ಠಲ ಹಲಗೇಕರ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ದೇವಾಲಯ ಉದ್ಘಾಟನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net