ಕಾಡ್ಗಿಚ್ಚು ತಡೆಗೆ ಸೆಟಲೈಟ್ ಅಲರ್ಟ್

fore
Published on

 ಶಿವರಾಜ.ಎಂ. ಬೆಂಗಳೂರು ಗ್ರಾಮಾಂತರ

ೆಬ್ರವರಿ ಆರಂಭದಲ್ಲೇ ಸುಡುಬಿಸಿಲು ರಾಚಲು ಆರಂಭಿಸಿದೆ, ಮಾರ್ಚ್ ಅಂತ್ಯದೊಳಗೆ ಬಿಸಿಲ ಝಳ ಮತ್ತಷ್ಟು ಹೆಚ್ಚಲಿದ್ದು, ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು, ಅಗ್ನಿಅವಘಡಗಳ ತಡೆಗೆ ಜಿಲ್ಲಾ ಅರಣ್ಯ ಇಲಾಖೆ ಸೆಟಲೈಟ್ ಅಲರ್ಟ್‌ಗೆ ಕಿವಿಯಾಗಿದೆ.

ಬೇಸಿಗೆ ಆರಂಭದಲ್ಲಿಯೇ ಎಚ್ಚೆತ್ತುಕೊಂಡಿರುವ ಜಿಲ್ಲಾ ಅರಣ್ಯ ಇಲಾಖೆ ಅರಣ್ಯಪ್ರದೇಶಗಳಲ್ಲಿ ಸಂಭವಿಸಬಹುದಾದ ಅಗ್ನಿ ಅನಾಹುತದಂಥ ಪ್ರಕರಣಗಳನ್ನು ಶೀಘ್ರ ಪತ್ತೆ ಮಾಡಿ, ಸಂಬಂಧಪಟ್ಟ ವ್ಯಾಪ್ತಿ, ವಾಚರ್‌ಗಳು ಹಾಗೂ ಅರಣ್ಯ ಸಿಬ್ಬಂದಿಗೆ ಶೀಘ್ರ ಮಾಹಿತಿ ರವಾನಿಸುವ ಸೆಟಲೈಟ್ ಅಲರ್ಟ್ ತಂತ್ರಜ್ಞಾನ ಅಳವಡಿಸಿಕೊಂಡಿದೆ. ಜಿಲ್ಲಾ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ಎಲ್ಲಿಯಾದರೂ ಬೆಂಕಿ ಕಾಣಿಸಿಕೊಂಡರೆ ಕ್ಷಣಾರ್ಧದಲ್ಲಿ ಸೆಟಲೈಟ್ ಮೂಲಕ ಅರಣ್ಯ ಸಿಬ್ಬಂದಿಗೆ ಅಲರ್ಟ್ ರವಾನೆಯಾಗಲಿದೆ. ಇದಕ್ಕಾಗಿಯೇ ಬೆಂಕಿ ನಂದಿಸುವ ಉಪಕರಣಗಳೊಂದಿಗೆ ಸಿಬ್ಬಂದಿ ಸಜ್ಜಾಗಿದ್ದು ಅಲರ್ಟ್ ಬಂದ ತಕ್ಷಣ ಬೆಂಕಿ ನಂದಿಸಲು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯಗಳಲ್ಲಿ ೈರ್‌ಲೈನ್ (ಬೆಂಕಿರೇಖೆ): ಸಾಮಾನ್ಯವಾಗಿ ೆ ಗ್ರಾಮಾಂತರ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಇದುವರೆಗೆ ದೊಡ್ಡಮಟ್ಟದ ಕಾಡ್ಗಿಚ್ಚು ಅವಾಂತರ ದಾಖಲಾಗಿಲ್ಲ, ಆದರೆ ಕಾಡಂಚಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಬೆಂಕಿ ಅವಘಡಗಳು ಸಂಭವಿಸಿದ ಸಾಕಷ್ಟು ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಪೈರ್‌ಲೈನ್ (ಬೆಂಕಿರೇಖೆ)ಗಳ ಮೂಲಕ ಅರಣ್ಯ ಇಲಾಖೆ ಕಾಡ್ಗಿಚ್ಚು ತಡೆಗೆ ಸನ್ನದ್ಧವಾಗುತ್ತಿದೆ. ಈ ಹಿಂದಿನ ವರ್ಷಗಳಲ್ಲಿದ್ದ ೈರ್‌ಲೈನ್‌ಗಳನ್ನು ಉಳಿಸಿಕೊಳ್ಳುವುದರ ಜತೆಗೆ ಮತ್ತಷ್ಟು ೈರ್‌ಲೈನ್‌ಗಳನ್ನು ನಿರ್ಮಿಸುತ್ತಿದ್ದು ಸಿಬ್ಬಂದಿ ಮುಂಜಾಗ್ರತೆ ವಹಿಸಿದ್ದಾರೆ.

ಗುಂಡಿಗಳ ಮೂಲಕ ತೇವಾಂಶ:

ಈ ಹಿಂದೆಯೆ ಮಳೆಗಾಲದಲ್ಲಿ ಅರಣ್ಯ ಪ್ರದೇಶಗಳಲ್ಲಿ ಸಾಕಷ್ಟು ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ, ಇದು ಅರಣ್ಯ ಪ್ರದೇಶಗಳಲ್ಲಿ ತೇವಾಂಶ ಹಿಡಿದಿಟ್ಟುಕೊಳ್ಳಲು ಬಹಳ ಸಹಕಾರಿಯಾಗಲಿದೆ. ಇವುಗಳನ್ನು ಮತ್ತಷ್ಟು ಹೆಚ್ಚಿಸಲು ಇಲಾಖೆ ಸಜ್ಜಾಗಿದೆ.

2153.83 ಹೆಕ್ಟೇರ್ ಅರಣ್ಯ: ಗ್ರಾಮಾಂತರ ಜಿಲ್ಲೆಯಲ್ಲಿ 2153.83 ಹೆಕ್ಟೇರ್‌ನಷ್ಟು ಅರಣ್ಯ ಪ್ರದೇಶವಿದೆ ಅದೇ ರೀತಿ ಈ ಅರಣ್ಯ ಪ್ರದೇಶಗಳು ನೂರಾರು ಗ್ರಾಮಗಳ ಗಡಿಹಂಚಿಕೊಂಡಿವೆ. ಸಾಮಾನ್ಯವಾಗಿ ಗಡಿಅಂಚಿನಲ್ಲಿ ಕಾಣಿಸಿಕೊಳ್ಳುವ ಬೆಂಕಿ ಅನಾಹುತಗಳು ಕಾಡ್ಗಿಚ್ಚಿಗೆ ಕಾರಣವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅರಣ್ಯಪ್ರದೇಶಗಳೊಂದಿಗೆ ಹಂಚಿಕೊಂಡಿರುವ ಗ್ರಾಮಗಳ ಕಡೆಗೆ ನಿಗಾವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಚರ್‌ಗಳ ನೇಮಕ: ಅರಣ್ಯ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಕಾಡ್ಗಿಚ್ಚು ಅವಾಂತರ ತಡೆಗೆ ಗ್ರಾಮಾಂತರ ಜಿಲ್ಲೆ ಪ್ರಾದೇಶಿಕ ಅರಣ್ಯ ಇಲಾಖೆ ವಾಚರ್‌ಗಳನ್ನು ನಿಯೋಜಿಸಿದೆ. ಬೇಸಿಗೆ ಮುಗಿಯುವವರೆಗೆ ಅರಣ್ಯಗಡಿ ಪ್ರದೇಶದಲ್ಲಿ ಪರಹೆ ತಿರುಗುವ ವಾಚರ್‌ಗಳು ಎಲ್ಲಿಯಾದರೂ ಬೆಂಕಿ ಕಾಣಿಸಿಕೊಂಡರೇ ತಕ್ಷಣವೇ ಕಾರ್ಯೋನ್ಮುಖರಾಗಲಿದ್ದಾರೆ. ಇದಕ್ಕಾಗಿಯೇ ್ಲ ಬೆಂಕಿ ನಿರೋಧಕ ಉಪಕರಣಗಳನ್ನು ಅಣಿಯಾಗಿರಿಕೊಳ್ಳಲಾಗಿದೆ.

ಅರಿವು ಕಾರ್ಯಕ್ರಮ ಜಾರಿ: ಗ್ರಾಮಾಂತರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸ್ವಾಭಾವಿಕ ಕಾಡ್ಗಿಚ್ಚಿನ ಪ್ರಕರಣಗಳು ಕಂಡುಬಂದಿಲ್ಲ ಎಂಬ ಮಾಹಿತಿ ಇದೆ. ಆದರೆ ಅರಣ್ಯದಂಚಿನ ಗ್ರಾಮಗಳ ರೈತರು ಒಣಹುಲ್ಲು ಸುಡುವ ಉದ್ದೇಶದಿಂದ ಬೆಂಕಿ ಹಚ್ಚುವುದು, ಜಮೀನಿನಲ್ಲಿ ಕಳೆಗೆ ಬೆಂಕಿಹಚ್ಚಿ ಅರಣ್ಯಪ್ರದೇಶಕ್ಕೆ ವ್ಯಾಪಿಸುವುದು, ಬೀಡಿ ಸಿಗರೇಟ್ ಸೇದಿ ಅರಣ್ಯದಂಚಿಗೆ ಎಸೆಯುವುದು ಹೀಗೆ ನಾನಾ ಕಾರಣಗಳಿಂದ ಅರಣ್ಯಪ್ರದೇಶದಲ್ಲಿ ಬೆಂಕಿ ವ್ಯಾಪಿಸುವುದು ಸಾಮಾನ್ಯವಾಗಿದೆ, ಈ ಹಿನ್ನಲೆಯಲ್ಲಿ ಗಡಿಗ್ರಾಮಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಅರಣ್ಯ ಇಲಾಖೆ ಬೀದಿನಾಟಕ, ಕರಪತ್ರ ಹಂಚಿಕೆ ಮತ್ತಿತರ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿದೆ.

ಎಲ್ಲೆಲ್ಲಿ ಆತಂಕ? ನೆಲಮಂಗಲ ತಾಲೂಕಿನ ಬಳಗೆರೆ, ಕೊರಟಗೆರೆ ಮತ್ತು ನೆಲಮಂಗಲ ತಾಲೂಕಿನ ಗಡಿಅಂಚಿನಲ್ಲಿನ ಮಾಗಡಿ ಮತ್ತು ನೆಲಮಂಗಲ ಗಡಿಪ್ರದೇಶ, ಕೊಯಿರಾ ಬೆಟ್ಟ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿ ಅರಣ್ಯ ಪ್ರದೇಶ, ದೇವನಹಳ್ಳಿಯ ಕೊಡಗುರ್ಕಿ, ಕಾರಣಹಳ್ಳಿ ಅರಣ್ಯ ಪ್ರದೇಶ, ದಿಬ್ಬಗಿರಿ, ನಾರಾಯಣಪುರಬೆಟ್ಟ, ರಾಯಸಂದ್ರಬೆಟ್ಟದ ತಪ್ಪಲಿನಲ್ಲಿ ಹೆಚ್ಚು ಅಗ್ನಿಅವಘಡಗಳು ಸಂಭವಿಸುತ್ತವೆ.

ಸಾಮಾನ್ಯವಾಗಿ ಬೇಸಿಗೆ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಕಾಡ್ಗಿಚ್ಚು ಅಥವಾ ಬೆಂಕಿ ಅವಘಡಗಳ ತಡೆಗೆ ಇಲಾಖೆ ಸನ್ನದ್ಧವಾಗಿದೆ, ಸೆಟಲೈಟ್ ಅಲರ್ಟ್ ತಂತ್ರಜ್ಞಾನದ ಮೂಲಕ ಎಲ್ಲಿಯಾದರೂ ಬೆಂಕಿ ಕಾಣಿಸಿಕೊಂಡರೆ ತಕ್ಷಣ ಮಾಹಿತಿ ದೊರೆಯುತ್ತದೆ, ಕ್ಷಣಾರ್ಧದಲ್ಲಿ ಸಿಬ್ಬಂದಿ ಬೆಂಕಿ ನಂದಿಸಲು ಇದು ಸಹಕಾರಿಯಾಗಿದೆ. ಉಳಿದಂತೆ ೈರ್‌ಲೈನ್ ನಿರ್ಮಾಣ, ವಾಚರ್‌ಗಳ ಮೂಲಕ ಬೆಂಕಿ ಅವಘಡ ತಡೆಗೆ ಇಲಾಖೆ ಸಿದ್ದವಾಗಿದೆ.

ಅಭಿಷೇಕ್ ಉಪ ಅರಣ್ಯ ಸಂರಕ್ಷಣಾಧಿಕಾರಿ (ಪ್ರಭಾರ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net