ಪರರ ನಿವೇಶನ ಕಬಳಿಸಿ ಸಿಕ್ಕಿಬಿದ್ದ ನೌಕರ, ಸಾಸ್ವೆಹಳ್ಳಿ ಗ್ರಾಪಂನಲ್ಲಿ ಪ್ರಕರಣ ಬಯಲಿಗೆ, ನಕಲಿ ದಾಖಲೆ ಸೃಷ್ಟಿಸಿ ಅಕ್ರಮ

Sasvehalli, Gram Panchai, Rama Bhovi, Neveshan, Illegal,
Published on

ಸಾಸ್ವೆಹಳ್ಳಿ: ಸಾಸ್ವೆಹಳ್ಳಿ ಗ್ರಾಮ ಪಂಚಾಯಿತಿ ದಿನಗೂಲಿ ನೌಕರನೊಬ್ಬ ನಕಲಿ ದಾಖಲೆ ಸೃಷ್ಟಿಸಿ ಬೇರೆಯವರ ಹೆಸರಿಗೆ ಮಂಜೂರಾದ ನಿವೇಶನಗಳನ್ನು ತನ್ನ ಕುಟುಂಬ ಸದಸ್ಯರ ಹೆಸರಿಗೆ ಬರೆದುಕೊಂಡು ಅಕ್ರಮ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ.

ಹೊನ್ನಾಳಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಮಬೋವಿ ಪರಿಶೀಲನೆ ವೇಳೆ ಪ್ರಕರಣ ಬಯಲಾಗಿದ್ದು ಇದೀಗ ನಿವೇಶನಗಳನ್ನು ಮರಳಿಸುವುದಾಗಿ ನೌಕರ ರವಿಕುಮಾರ್ ತಿಳಿಸಿದ್ದಾನೆ.

ಗ್ರಾಪಂ ವ್ಯಾಪ್ತಿಯ ಐನೂರಿನ ಕಂದಾಯ ಇಲಾಖೆಯ ಜಾಗದಲ್ಲಿ 2013ರಲ್ಲೇ ನಿವೇಶನ ನಿರ್ಮಿಸಿ ಸೂರಿಲ್ಲದವರಿಗೆ ಹಂಚಲಾಗಿತ್ತು. ಸರ್ವೇ ನಂಬರ್ 26ರಲ್ಲಿ 21ಎಕರೆ 19 ಗುಂಟೆೆ ಜಮೀನಿನಲ್ಲಿ ನಿವೇಶನ ರಹಿತ 44 ಕುಟುಂಬಗಳಿಗೆ 94 ಸಿ ಅಡಿ ತಹಸೀಲ್ದಾರ್ ನಿವೇಶನ ಮಂಜೂರು ಮಾಡಿದ್ದರು.

ಈ ಪೈಕಿ ಬೇರೆಯವರ ಹೆಸರಿಗೆ ಮಂಜೂರಾದ 2 ನಿವೇಶನಗಳನ್ನು (220 ಮತ್ತು 221)ಗ್ರಾಪಂ ನೌಕರ ತನ್ನ ಪತ್ನಿ ಹಾಗೂ ಸಹೋದರ ಸಂಬಂಧಿಯ ಪತ್ನಿಯ ಹೆಸರಿಗೆ 30/60 ವಿಸ್ತೀರ್ಣದ ಎರಡು ನಿವೇಶನಗಳ್ನು ಖಾತಾ ಪುಸ್ತಕದಲ್ಲಿ ಬರೆದಿದ್ದ ಎಂದು ದೂರಲಾಗಿತ್ತು.

ಈ ಸಂಬಂಧ ಐನೂರಿನ ನಾಗರಾಜ್ ಗ್ರಾಪಂಗೆ ದೂರು ನೀಡಿದ್ದರು.ಪಿಡಿಒ ಸೇರಿ ಯಾರೂ ಕ್ರಮ ಕೈಗೊಂಡಿರಲಿಲ್ಲ. ಇಂದು ತಾಪಂ ಇಒ ರಾಮಾ ಬೋವಿ ಖುದ್ದು ಪರಿಶೀಲಿಸಿದರು.

ತಪ್ಪೊಪ್ಪಿಗೆ, ನಿವೇಶನ ಮರಳಿಸುವ ಹೇಳಿಕೆ

ಬೇರೆಯವರ ನಿವೇಶನವನ್ನು ತನ್ನ ಕುಟುಂಬ ಸದಸ್ಯರ ಹೆಸರಿಗೆ ಬರೆದುಕೊಂಡ ಗ್ರಾಪಂ ದಿನಗೂಲಿ ನೌಕರನ ಪ್ರಕರಣ ಕುರಿತು ತಾಪಂ ಇಒ ರಾಮಾ ಭೋವಿ ಶುಕ್ರವಾರ ಗ್ರಾಪಂನಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ನೌಕರ ತಪ್ಪೊಪ್ಪಿಕೊಂಡಿದ್ದು, ಗ್ರಾಪಂಗೆ ನಿವೇಶನ ಮರಳಿ ನೀಡುವುದಾಗಿ ಹೇಳಿದ್ದಾರೆ ಎಂದು ಇಒ ರಾಮಬೋವಿ ಸಭೆ ಬಳಿಕ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net