ಸ್ವರಾಜ್ಯದ ಕನಸು ಕಂಡಿದ್ದ ಗಾಂಧೀಜಿ

Sasvehalli, Gandhi, Jayantyutsava,
Published on

ಸಾಸ್ವೆಹಳ್ಳಿ: ಗಾಂಧೀಜಿ ಸ್ವರಾಜ್ಯದ ಕನಸು ಕಂಡಿದ್ದರು. ಗ್ರಾಮವೊಂದು ಸ್ವಚ್ಛವಾಗಿದ್ದರೆ ದೇಶವೇ ಸ್ವಚ್ಛವಾದಂತೆ ಎಂದು ಸಾಸ್ವೆಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಬ್ಬಾರ್ ಅಲಿ ಖಾನ್ ಹೇಳಿದರು.

ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಾಂಧಿ ಜಯಂತ್ಯುತ್ಸವದ ವೇಳೆ ಗಣಿತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ, ಮಾತನಾಡಿದರು.

ಗಾಂಧೀಜಿ ಸ್ವಾತಂತ್ರ್ಯ ಬಂದ ಬಳಿಕ ಯಾವುದೇ ಹುದ್ದೆಗೆ ಆಸೆ ಪಡಲಿಲ್ಲ. ಅವರು ಮೇಲು- ಕೀಳು, ತಾರತಮ್ಯ ಮಾಡಿರಲಿಲ್ಲ. ಅವರ ಆದರ್ಶಗಳನ್ನು ಜೀವನಗಳಲ್ಲಿ ಅಳವಡಿಸಿಕೊಳ್ಳೋಣ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸವಿತಾ ಉಮೇಶ್, ಸದಸ್ಯ ಶುಂಠಿ ಕರಿಬಸಪ್ಪ, ಮುಖ್ಯಶಿಕ್ಷಕ ಜೀವ್ಲನಾಯ್ಕ, ಗ್ರಾಪಂ ಪಿಡಿಒ ಹನುಮಂತನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net