ರಾಂಪುರದಲ್ಲಿದ್ದ ಚಿರತೆ ಬುಳ್ಳಾಪುರದಲ್ಲಿ ಪ್ರತ್ಯಕ್ಷ

Sasvehalli, Cheetah, Pratyaksha,
Published on

ಮನೆ ಪಕ್ಕದಲ್ಲಿದ್ದ ಮೇಕೆ ತಿಂದ ವನ್ಯಜೀವಿ I ಗ್ರಾಮದಿಂದ ಗ್ರಾಮಕ್ಕೆ ಬೋನು ಶಿಫ್ಟ್

ಸಾಸ್ವೆಹಳ್ಳಿ: ಹೋಬಳಿಯ ಬುಳ್ಳಾಪುರ ಗ್ರಾಮದ ಕರಡಿ ಹಾಲೇಶಪ್ಪ ಎಂಬುವವರ ಮನೆಯ ಪಕ್ಕದಲ್ಲಿ ಕಟ್ಟಲಾಗಿದ್ದ ಮೇಕೆ ಮೇಲೆ ಮಂಗಳವಾರ ರಾತ್ರಿ ಚಿರತೆ ದಾಳಿ ನಡೆಸಿ, ಅರೆಬರೆಯಾಗಿ ತಿಂದು ಬಿಟ್ಟು ಹೋಗಿದೆ.

ಕಳೆದ ವಾರ ಹೋಬಳಿಯ ಚಿಕ್ಕಬಾಸೂರು ತಾಂಡ ಸಮೀಪ ಕಾಣಿಸಿಕೊಂಡಿದ್ದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇರಿಸಿದ್ದರು. ನಂತರ ರಾಂಪುರದ ರುದ್ರಭೂಮಿ ಸಮೀಪದ ಗೋಮಾಳದಲ್ಲಿ ಬೀಡುಬಿಟ್ಟಿದ್ದ ಕುರಿ ಹಿಂಡಿನ ಮೇಲೆ ದಾಳಿ ನಡೆಸಿ, ಮೂರು ಕುರಿ ಕೊಂದು ಹಾಕಿತ್ತು. ಅಲ್ಲಿಗೆ ಬೋನನ್ನು ಸ್ಥಳಾಂತರಿಸಲಾಗಿತ್ತು.

ಮಂಗಳವಾರ ಬುಳ್ಳಾಪುರ ಗ್ರಾಮದಲ್ಲಿ ಮೇಕೆ ಕೊಂದು ಹಾಕಿದ್ದು, ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಯವರು ಬುಧವಾರ ಮಧ್ಯಾಹ್ನ ಚಿರತೆ ಸೆರೆ ಹಿಡಿಯಲು ಬೋನನ್ನು ರಾಂಪುರದಿಂದ ಬುಳ್ಳಾಪುರಕ್ಕೆ ಸ್ಥಳಾಂತರಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net