ಶಶಿಕಲಾ ಹಲಗೂರು ಗ್ರಾಪಂ ಅಧ್ಯಕ್ಷೆ

 ಹಲಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಶ್ರೀನಿವಾಸಾಚಾರಿ ಅವರನ್ನು ಬೆಂಬಲಿಗರು ಅಭಿನಂದಿಸಿದರು.
ಹಲಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಶ್ರೀನಿವಾಸಾಚಾರಿ ಅವರನ್ನು ಬೆಂಬಲಿಗರು ಅಭಿನಂದಿಸಿದರು.
Published on

ಹಲಗೂರು: ಹಲಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತೆ ಶಶಿಕಲಾ ಆಯ್ಕೆಯಾದರು.

ರಕ್ಷಿತಾ ಜೀವನ್‌ಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಜೆಡಿಎಸ್ ಬೆಂಬಲಿತೆ ರುಕ್ಸಾನ ಬೇಗಮ್ 11 ಮತ ಪಡೆದರೆ, ಕಾಂಗ್ರೆಸ್ ಬೆಂಬಲಿತೆ ಶಶಿಕಲಾ 15 ಮತ ಪಡೆದು ವಿಜೇತರಾದರು ಎಂದು ಚುನಾವಣಾಧಿಕಾರಿ ಘೋಷಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಶಿಕಲಾ, ಇದು ನನ್ನ ಗೆಲುವಲ್ಲ. ನಮ್ಮ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ಅವರ ಗೆಲುವು ಎಂದು ತಿಳಿಸಿದರು.

ಇದೇ ವೇಳೆ ಶಶಿಕಲಾ ಶ್ರೀನಿವಾಸಚಾರಿ ಅವರನ್ನು ಪಕ್ಷದ ಕಾರ್ಯಕರ್ತರು ಮತ್ತು ನರೇಂದ್ರಸ್ವಾಮಿ ಬೆಂಬಲಿಗರು ಅಭಿನಂದಿಸಿದರು. ಪಕ್ಷದ ಮುಖಂಡರಾದ ಸಿ.ಪಿ.ರಾಜು, ಜೀವನ್‌ಕುಮಾರ್, ಎಚ್.ಆರ್.ಪದ್ಮನಾಭ, ಎಚ್.ವಿ. ರಾಜು, ಎಚ್.ಆರ್.ದೇವರಾಜು, ಗೋಪಾಲ್, ಚಂದ್ರಕುಮಾರ್, ಕೆಂಪಯ್ಯನ ದೊಡ್ಡಿ ಮೋಹನ್‌ಕುಮಾರ್, ಕೆಂಪಣ್ಣ ,ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲತಾ ಮಹದೇವ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net