ವ್ಯಕ್ತಿತ್ವ ನಿರ್ಮಾಣದಿಂದ ನೈತಿಕತೆಯ ಉನ್ನತಿ : ಗೌರಿ ಶಂಕರ್ ಹೇಳಿಕೆ

New Project (5)
Published on

ಹಳೆಯಂಗಡಿ: ಸಮಾಜದಲ್ಲಿ ನೈತಿಕತೆ ಕುಸಿಯುತ್ತಿದೆ. ಯುವ ಜನತೆ ಸಮಾಜದ ಮುಖ್ಯವಾಹಿನಿಯಿಂದ ದೂರ ಸರಿಯುತ್ತಿದ್ದಾರೆ. ಶಿಸ್ತು, ಪ್ರಾಮಾಣಿಕತೆ ಕ್ಷೀಣಿಸುತ್ತಿರುವ ಈ ದಿನಗಳಲ್ಲಿ ಉತ್ಥಾನ ಬಳಗದಿಂದ ವ್ಯಕ್ತಿತ್ವ ನಿರ್ಮಾಣ ಕಾರ್ಯ ಅಭಿನಂದನೀಯ ಎಂದು ಮದ್ರಾಸ್ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಗೌರಿ ಶಂಕರ್ ಹೇಳಿದರು.

ಸಸಿಹಿತ್ಲು ಉತ್ಥಾನ ಬಳಗ ಸಂಸ್ಥೆಯ 40ನೇ ವಾರ್ಷಿಕೋತ್ಸವ ಹಾಗೂ ವಿದ್ಯಾ ಸಮೃದ್ಧಿ ನಿಧಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎನ್‌ಐಟಿಕೆ ಸುರತ್ಕಲ್‌ನ ಡೀನ್ ಚಿತ್ತರಂಜನ್ ಹೆಗ್ಡೆ ಮಾತನಾಡಿದರು. ಭಗವತಿ ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ ಅಧ್ಯಕ್ಷತೆ ವಹಿಸಿದ್ದರು. ಸಸಿಹಿತ್ಲು ಭಗವತಿ ಕ್ಷೇತ್ರದ ಪ್ರಧಾನ ಮೊಕ್ತೇಸರ ಶ್ರೀನಿವಾಸ ಪೂಜಾರಿ ಶುಭ ಹಾರೈಸಿದರು.

25 ಲಕ್ಷ ರೂ. ಮೊತ್ತದ ವಿದ್ಯಾ ಸಮೃದ್ಧಿ ನಿಧಿ ಯೋಜನೆ ಲೋಕಾರ್ಪಣೆ ಮಾಡಲಾಯಿತು. ವಿದ್ಯಾರ್ಥಿವೇತನ ಮತ್ತು ಅಶಕ್ತರ ಆಸರೆಗಾಗಿ 60 ಸಾವಿರ ರೂ. ವಿತರಿಸಲಾಯಿತು. ವಿದ್ಯಾನಿಧಿಗೆ ದೇಣಿಗೆ ನೀಡಿದ ದಾನಿಗಳಾದ ಮುಂಬೈ ಉದ್ಯಮಿ ಮೋಹನ್ ಭಟ್ ಮತ್ತು ಸಸಿಹಿತ್ಲುವಿನ ಇಂದುಶ್ರೀ ಪರಿವಾರವನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸುಬ್ರಹ್ಮಣ್ಯ ಭಟ್, ಚಂದ್ರಕುಮಾರ್, ಜಯಶ್ರೀ, ದಿ.ತಂಗಿಯಕ್ಕ ಮನೆಯವರು ಮತ್ತು ಲೆ.ಸುಹಾಸ್ ಕೆ. ಅವರನ್ನು ಗೌರವಿಸಲಾಯಿತು.

ರೋಹಿತಾಕ್ಷ ಸ್ವಾಗತಿಸಿದರು. ಗುರುರಾಜ್ ಸಸಿಹಿತ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಭಾಷ್ ವಂದಿಸಿದರು. ಹೇಮಚಂದ್ರ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net