ದೈವಸ್ಥಾನ ಅಭಿವೃದ್ಧಿಯಿಂದ ಲೋಕ ಕಲ್ಯಾಣ : ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ವಿಶ್ವಾಸ

shilanaysa
Published on

ವಿಜಯವಾಣಿ ಸುದ್ದಿಜಾಲ ಹಳೆಯಂಗಡಿ

ಸಾಮರಸ್ಯ ಹಾಗೂ ಜನರು ನೆಮ್ಮದಿ ಪಡೆಯುವ ಕೇಂದ್ರವಾದ ದೈವಸ್ಥಾನದ ಅಭಿವೃದ್ಧಿಯಿಂದ ಗ್ರಾಮದ ಅಭಿವೃದ್ಧಿಯಾಗಿ ಲೋಕಕಲ್ಯಾಣವಾಗಲಿದೆ ಎಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಹೇಳಿದರು.

ಸಸಿಹಿತ್ಲು ಶ್ರೀ ಸಾರಂತ್ತಾಯ ಗರೋಡಿ ಹಾಗೂ ಉಳ್ಳಾಯ ದೈವಸ್ಥಾನದ ಪುನಃ ನಿರ್ವಾಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ವಾತನಾಡಿದರು.

ಮಂಗಳೂರಿನ ಬಂಟರ ಯಾನೆ ನಾಡವರ ವಾತೃ ಸಂಘದ ಅಧ್ಯಕ್ಷ ಅಜಿತ್ ಕುವಾರ್ ರೈ ವಾಲಾಡಿ ವಾತನಾಡಿ, ಜನರು ಸಂಟಿತರಾಗಿ ತಮ್ಮ ಆಶೋತ್ತರಗಳನ್ನು ಈಡೇರಿಸಲು ಪೂಜಾ ಕೇಂದ್ರಗಳು ನಿರ್ವಾಣಗೊಂಡಿದ್ದು, ಅವುಗಳನ್ನು ರಕ್ಷಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದರು.

ಪಂಜ ಭಾಸ್ಕರ ಭಟ್ ಪ್ರಾರ್ಥನೆ ನೆರವೇರಿಸಿದರು. ವೈದಿಕ ರಂಗನಾಥ ಭಟ್, ಶ್ರೀಪತಿ ಭಟ್, ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ದೇವಸ್ಥಾನ ಪುನಃನಿರ್ವಾಣದ ಮುಹೂರ್ತಕ್ಕೆ ಚಾಲನೆ ನೀಡಿದರು. ವಾಸ್ತು ಶಿಲ್ಪಿ ಉಮೇಶ್ ಆಚಾರ್ಯ ಅವರನ್ನು ಗೌರವಿಸಲಾಯಿತು.

ಗರೋಡಿಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಿ.ಬಿ.ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಗರೋಡಿಯ ಗೌರವಾಧ್ಯಕ್ಷ ಕಾಂತು ಲಕ್ಕಣ, ಗಡಿಪ್ರಧಾನರು ಯಾನೆ ಪಠೇಲ್ ಯಾದವ ಜಿ.ಬಂಗೇರ, ಮಹೇಶ್ ಶಾಂತಿ, ಉದ್ಯಮಿ ನಾರಾಯಣ ಟಿ.ಪೂಜಾರಿ, ವಾಜಿ ಸಚಿವ ಅಭಯಚಂದ್ರ ಜೈನ್, ವಿನಯ ಕುವಾರ್ ಸೊರಕೆ, ಮಿಥುನ್ ರೈ, ರಾಜಶೇಖರ ಕೋಟ್ಯಾನ್, ಪದ್ಮರಾಜ ಪೂಜಾರಿ, ಉದ್ಯಮಿ ಧನಂಜಯ ಶೆಟ್ಟಿ, ಉದಯ ಕುವಾರ್ ಶೆಟ್ಟಿ, ದಾಮೋದರ ದಂಡಕೇರಿ, ಗುರುರಾಜ ಪೂಜಾರಿ ತೋಕೂರು, ವಾಮನ್ ಇಡ್ಯ, ಕೆಪಿಸಿಸಿ ಸದಸ್ಯ ವಸಂತ ಬೆರ್ನಾಡ್, ಯೋಗೀಶ್ ಕೋಟ್ಯಾನ್, ಬಪ್ಪನಾಡು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಡಿ.ಪಳ್ಳಿ, ಸುರೇಶ್ ಪೂಜಾರಿ, ಉಮೇಶ್ ಸಾಲ್ಯಾನ್, ಅನಿಲ್ ಸಸಿಹಿತ್ಲು, ಮಹಿಳಾ ಸಮಿತಿಯ ಲೀಲಾ ವಸಂತ್, ಶಕುಂತಳಾ ಭೋಜ ಬಂಗೇರ, ಪುಷ್ಪಾ ದಯಾನಂದ್, ನವೀನ್ ಕುವಾರ್ ಮತ್ತಿತರರಿದ್ದರು.

ಕಾರ್ಯಾಧ್ಯಕ್ಷ ಪರವಾನಂದ ಸಾಲ್ಯಾನ್ ಸ್ವಾಗತಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಜಗನ್ನಾಥ ಕೋಟ್ಯಾನ್ ವಂದಿಸಿದರು. ಎಸ್.ಆರ್.ಪ್ರಭಾತ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net