

ತೇರದಾಳ: ತಾಲೂಕಿನ ಸಸಾಲಟ್ಟಿ ಶಿವಲಿಂಗೇಶ್ವರರ 67ನೇ ಪುಣ್ಯಾರಾಧನೆ ಅಂಗವಾಗಿ ಭಾನುವಾರ ಸಂಜೆ ರಥೋತ್ಸವ ಜರುಗಿತು.
ಜಾತ್ರೆ ಅಂಗವಾಗಿ ೆ.28ರಿಂದ ಮಾರ್ಚ್ 7ರವರೆಗೆ ಯರನಾಳ ಹಿರೇಮಠದ ಶಿವಪ್ರಸಾದ ದೇವರು, ಶಿರಗೂರಿನ ಆಭಿನವ ಕಲ್ಮೇಶ್ವರ ಶ್ರೀ ಹಾಗೂ ನಾಡಿನ ಹೆಸರಾಂತ ಪ್ರವಚನಕಾರರು ಕೀರ್ತನೆ ಹಾಗೂ ಪ್ರವಚನ ನಡೆಸಿಕೊಟ್ಟರು. ಶನಿವಾರ ಸಂಜೆ ಸಸಾಲಟ್ಟಿ ಸೇರಿದಂತೆ ಸುತ್ತಲಿನ ಅನೇಕ ಭಜನಾ ತಂಡಗಳಿಂದ ಭಜನೆ ಕಾರ್ಯಕ್ರಮ ಜರುಗಿತು. ಭಕ್ತರು ಮಡಿಯಿಂದ ದೀರ್ಘ ದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದರು.
ಭಾನುವಾರ ಶಿವಲಿಂಗೇಶ್ವರರ ಕೃರ್ತ ಗದ್ದುಗೆಗೆ ರುದ್ರಾಭಿಷೇಕ, ಗಣಾರಾಧನೆ ನಂತರ ಮಹಾಪ್ರಸಾದ ವಿತರಣೆ ಮಾಡಲಾಯಿತು.
ಸಂಜೆ 6 ಗಂಟೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭವ್ಯ ನಂದಿಕೋಲು ಹಾಗೂ ರಥೋತ್ಸವ ಜರುಗಿತು. ರಥಕ್ಕೆ ಭಕ್ತರು ಬೆಂಡು, ಬತ್ತಾಸು, ಬಿಸ್ಕತ್ ಎಸೆದು ಭಕ್ತಿ ಸಮರ್ಪಿಸಿದರು. ಕೈಪೆಟ್ಟು, ಕರಡಿ ಮಜಲು ಸೇರಿ ಹಲವು ಕಲಾ ತಂಡಗಳು ರಥೋತ್ಸವಕ್ಕೆ ಮೆರುಗು ತಂದವು.
ಕಮಡೊಳ್ಳಿಯ ಅಭಿನವ ರಾಚೋಟೇಶ್ವರ ಶ್ರೀಗಳು, ಯರನಾಳದ ಶಿವಪ್ರಸಾದ ಶ್ರೀಗಳು, ತೇರದಾಳದ ಗಂಗಾಧರ ದೇವರು, ಚಿಮ್ಮಡದ ಪ್ರಭು ಶ್ರೀಗಳು, ಶೇಗುಣಸಿ ಮಹಾಂತಪ್ರಭು ಶ್ರೀಗಳು, ಶಿರಗೂರಿನ ಆಭಿನವ ಕಲ್ಮೇಶ್ವರ ಶ್ರೀಗಳು ಮತ್ತಿತರರಿದ್ದರು.