ಸಸಾಲಟ್ಟಿ ಸಾಹಿತ್ಯ ಸೇವೆ ಸ್ಮರಣೀಯ

5ravig3-Web1
ಬೆಳಗಾವಿಯ ಕನ್ನಡ ಭವನದಲ್ಲಿ ಬುಧವಾರ ಸಂಜೆ ಸಾಹಿತಿ ದಿ.ಬಸವರಾಜ ಸಸಾಲಟ್ಟಿ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ಡಾ.ಹೇಮಾವತಿ ಸೋನೊಳ್ಳಿ, ಪ್ರಕಾಶ ದೇಶಪಾಂಡೆ, ಜ್ಯೋತಿ ಬದಾಮಿ, ರತ್ನಪ್ರಭಾ ಬೆಲ್ಲದ, ಯ.ರು.ಪಾಟೀಲ, ಶಾಂತಾ ಮಸೂತಿ ಇತರರಿದ್ದರು.
Published on

ಬೆಳಗಾವಿ: ಕನ್ನಡ ಭಾಷೆಯ ಉಳಿವಿಗೆ ಕನ್ನಡ ಶಕ್ತಿಯಾಗಿ ಸಹಕಾರ ಮನೋಭಾವನೆ ಹೊಂದಿದ ಹಿರಿಯ ಸಾಹಿತಿ ದಿ.ಬಸವರಾಜ ಸಸಾಲಟ್ಟಿ ಅವರು ನಾಡ ಭಾಷೆಗಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿದ್ದಾರೆ.

ನಗರದ ಕನ್ನಡ ಭವನದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಸಾಹಿತಿ, ದಿ.ಬಸವರಾಜ ಸಸಾಲಟ್ಟಿ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಸಸಾಲಟ್ಟಿ ಅವರು ನೇರ, ದಿಟ್ಟ ಮಾತುಗಾರರಾಗಿ ಅತ್ಯುತ್ತಮ ವ್ಯಕ್ತಿತ್ವ ಹೊಂದಿದ್ದರು. ಯುವ ಸಾಹಿತಿಗಳು ಹಾಗೂ ಮಹಿಳಾ ಸಾಹಿತಿಗಳಿಗೆ ಪ್ರೋತ್ಸಾಹ ನೀಡಿ, ಕನ್ನಡ ಸೇವೆ ಮಾಡಲು ಪ್ರೇರಣೆ ನೀಡುತ್ತಿದ್ದರು. ಅವರ ಆದರ್ಶಗಳು ಯುವ ಸಾಹಿತಿಗಳಿಗೆ ದಾರಿ ದೀಪವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಸಾಹಿತಿಗಳಾದ ಡಾ.ಹೇಮಾವತಿ ಸೋನೊಳ್ಳಿ, ಪ್ರಕಾಶ ದೇಶಪಾಂಡೆ, ಜ್ಯೋತಿ ಬದಾಮಿ, ರತ್ನಪ್ರಭಾ ಬೆಲ್ಲದ, ಯ.ರು.ಪಾಟೀಲ, ಶಾಂತಾ ಮಸೂತಿ, ಸುಭಾಷ ಏಣಗಿ, ಕೀರ್ತಿ ಕಾಸರಗೋಡ, ಶ್ರೀರಂಗ ಜೋಶಿ, ಪಾರ್ವತಿ ಪಾಟೀಲ, ಲಲಿತಾ ಕಾಶಪ್ಪನವರ, ಶಿವಾನಂದ ತಲ್ಲೂರ,
ಬಾಬು ನಾಯಕ, ಅಣ್ಣಾಸಾಹೇಬ ಕೊರಬು, ಎಂ.ವೈ.ಮೆಣಶಿಣಕಾಯಿ, ಶಶಿಕಲಾ ಯಲಿಗಾರ, ಗುರು ಕೋರಿ, ಮಹಾಂತೇಶ ರೇಶ್ಮಿ, ಚೇತನ ಏಣಗಿಮಠ ಸೇರಿದಂತೆ ಕ.ಸಾ.ಪ. ಸದಸ್ಯರು ಮತ್ತಿತರರು ಇದ್ದರು.

ಬೆಳಗಾವಿಯ ಕನ್ನಡ ಭವನದಲ್ಲಿ ಬುಧವಾರ ಸಂಜೆ ಸಾಹಿತಿ ದಿ.ಬಸವರಾಜ ಸಸಾಲಟ್ಟಿ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ಡಾ.ಹೇಮಾವತಿ ಸೋನೊಳ್ಳಿ, ಪ್ರಕಾಶ ದೇಶಪಾಂಡೆ, ಜ್ಯೋತಿ ಬದಾಮಿ, ರತ್ನಪ್ರಭಾ ಬೆಲ್ಲದ, ಯ.ರು.ಪಾಟೀಲ, ಶಾಂತಾ ಮಸೂತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net