ಭರವಸೆ ಈಡೇರಿಸಲು ನಿರಂತರ ಪ್ರಯತ್ನ- ಲಕ್ಷ್ಮೀ ಹೆಬ್ಬಾಳಕರ್

0102
Published on

ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸಂತಿ ಬಸ್ತವಾಡ ಗ್ರಾಮದಲ್ಲಿ ಎರಡು ದೇವಾಲಯ ನಿರ್ಮಾಣ ಕಾಮಗಾರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭೂಮಿಪೂಜೆ ನೆರವೇರಿಸಿದರು.

ಕರ್ನಾಟಕ ನೀರಾವರಿ ನಿಗಮದ ವತಿಯಿಂದ ಸುಮಾರು 25 ಲಕ್ಷ ರೂ.ಗಳ ವೆಚ್ಚದಲ್ಲಿ ಶ್ರೀ ಸಾತೇರಿ ಮಾವುಲಿ ದೇವಸ್ಥಾನದ ನಿರ್ಮಾಣದ ಹಂತದಲ್ಲಿರುವ ಕಟ್ಟಡದ ಸ್ಲ್ಯಾಬ್ ಪೂಜೆ ಹಾಗೂ ಬಸವೇಶ್ವರ ದೇವಸ್ಥಾನದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ನಂತರ ಅವರು ಮಾತನಾಡಿ, ದೈವೀ ಕೃಪೆ ಮತ್ತು ಜನರ ಆಶೀರ್ವಾದ ಇದ್ದರೆ ಯಾವುದೂ ಅಸಾಧ್ಯವಲ್ಲ. ಈ ಎರಡೂ ಭಾಗ್ಯ ನನಗೆ ಇರುವುದರಿಂದ ಕಳೆದ ಎರಡೂವರೆ ವರ್ಷದಿಂದ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಲು ಸಾಧ್ಯವಾಗುತ್ತಿದೆ. ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.

ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು. ಗ್ರಾಮಸ್ಥರ ಆಶಯದಂತೆ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಗ್ರಾಮದ ಹಿರಿಯರಾದ ಯುವರಾಜ ಕದಂ, ಇಂಜಿನಿಯರ್ ಸುಭಾಷ ನಾಯಕ, ಸಹಾಯಕ ಇಂಜಿನಿಯರ್ ದೇಮಣ್ಣ ನಾಯ್ಕ, ಆಶ್ಪಖ್ ತಹಶೀಲ್ದಾರ್, ರಾಮಾ ಪಾಟೀಲ, ರಾಮನಿಂಗ ಕರ್ಲೇಕರ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net