ಸರ್ವೆಪಲ್ಲಿ ರಾಧಾಕೃಷ್ಣನ್ ಶ್ರೇಷ್ಠ ಶಿಕ್ಷಣ ತಜ್ಞ

05Kagwad2
ಕಾಗವಾಡ ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು. ಡಾ.ಎ.ಎಂ.ಜಕ್ಕಣ್ಣವರ, ಡಾ.ಎಸ್.ಎ.ಕರ್ಕಿ, ಪ್ರೊ.ವಿ.ಎಸ್.ತುಗಶೆಟ್ಟಿ, ಪ್ರೊ.ಆರ್.ಎಸ್.ನಾಗರಡ್ಡಿ ಇತರರಿದ್ದರು.
Published on

ಕಾಗವಾಡ: ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರೂ ಶಿಕ್ಷಕ ವೃತ್ತಿಯ ಬಗ್ಗೆ ಅಪಾರ ಗೌರವ ಹೊಂದಿದ್ದರು. ಅವರೊಬ್ಬ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು ಎಂದು ಡಾ.ಎ.ಎಂ.ಜಕ್ಕಣ್ಣವರ ಹೇಳಿದರು. ಪಟ್ಟಣದ ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಡಾ.ರಾಧಾಕೃಷ್ಣನ್ ದೇಶ ಕಂಡ ಅಪರೂಪದ ಶಿಕ್ಷಕರು, ತತ್ವಜ್ಞಾನಿ, ರಾಜಕಾರಣಿಯಾಗಿದ್ದರು ಎಂದರು. ಪ್ರಾಚಾರ್ಯ ಡಾ.ಎಸ್.ಎ.ಕರ್ಕಿ ಮಾತನಾಡಿ, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು. ಆಡಳಿತಾಕಾರಿ ಪ್ರೊ.ವಿ.ಎಸ್.ತುಗಶೆಟ್ಟಿ, ದೈಹಿಕ ಶಿಕ್ಷಣ ಸಹಾಯಕ ಪ್ರಾಧ್ಯಾಪಕ ಪ್ರೊ.ಆರ್.ಎಸ್.ನಾಗರಡ್ಡಿ, ಪ್ರೊ.ಜೆ.ಕೆ.ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net