

ವಿಜಯವಾಣಿ ಸುದ್ದಿಜಾಲ ಧಾರವಾಡ
ಅರಮನೆ, ಗುರಮನೆ ಆಶ್ರಯವಿಲ್ಲದೆ ಬೆಳೆದ ಸರ್ವಜ್ಞ ಯೋಗಿಯಾಗಿ, ಸರ್ವ ಸಂಚಾರಿಯಾಗಿ ಸಮುದಾಯವನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದ ನಿಜವಾದ ಜಂಗಮ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಪ್ರೇಮಾನಂದ ಲಕ್ಕಣ್ಣವರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಪಾರ್ವತೆವ್ವ ಮಲ್ಲಯ್ಯ ರಾಚಯ್ಯನವರ ದತ್ತಿ ನಿಮಿತ್ತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಏರ್ಪಡಿಸಿದ್ದ ಸರ್ವಜ್ಞನ ವಚನಗಳ ಕಂಠಪಾಠ ಮತ್ತು ಅರ್ಥ ವಿವರಣೆ ಸ್ಪರ್ಧೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಲೋಕ ಸಂಚಾರಿ ಸರ್ವಜ್ಞ ಕುರಿತು ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಿವಶಂಕರ ಹಿರೇಮಠ ಮಾತನಾಡಿ, ಸಾಮಾಜಿಕ ಬದಲಾವಣೆಯ ಹರಿಕಾರ ಹಾಗೂ ತತ್ವ ಶಾಸ್ತ್ರನಾಗಿದ್ದ ಸರ್ವಜ್ಞನು ಜಗತ್ತಿನ ಹಿತವನ್ನು ಸಾಧಿಸಲು ಬದುಕಬೇಕೆ ವಿನಃ, ಸ್ವಾರ್ಥಕ್ಕಾಗಿ ಬದುಕಬಾರದು ಎಂದು ಸಾರಿದವನು ಎಂದರು.
ಸ್ಪರ್ಧೆಯಲ್ಲಿ ರಾಮಲಿಂಗ ಬೆಳಹಾರ (ಪ್ರ), ಅಂಜನಾ ತೋಟನ್ನವರ (ದ್ವಿ), ಪ್ರಗತಿ ಕುಲಕರ್ಣಿ (ತೃ) ಹಾಗೂ ಜಾನಕಿ ಕಾಳಿ, ಸುಪ್ರಿಯಾ ಜನಗೌಡ್ರ, ಭೂಮಿಕಾ ಪವಾರ ಸಮಾಧಾನಕರ ಬಹುಮಾನ ಪಡೆದರು. ನಿರ್ಣಾಯಕರಾಗಿ ವೀರಣ್ಣ ಒಡ್ಡೀನ, ಡಾ. ಜಿನದತ್ತ ಹಡಗಲಿ ಮತ್ತು ಡಾ. ಚಿದಾನಂದ ಮಾಸನಕಟ್ಟಿ ಭಾಗವಹಿಸಿದ್ದರು.
ಶಿವಪುತ್ರ ರಾಚಯ್ಯನವರ, ಸತೀಶ ತುರಮರಿ, ಗುರು ಹಿರೇಮಠ, ಡಾ. ಧನವಂತ ಹಾಜವಗೋಳ, ಸಂಗಯ್ಯ ಶಿವಪ್ಪಯ್ಯನಮಠ, ಜಿ.ಎಲ್. ಪಾಟೀಲ, ಡಾ. ಜಿ.ಎಸ್. ತೊರಗಲ್ಲಮಠ, ಅಶೋಕ ಪಟಾತ, ಶಂಕರಲಿಂಗ ಶಿವಳ್ಳಿ, ನಿಂಗಣ್ಣ ಕುಂಟಿ, ಬಿ.ಎಸ್. ಶಿರೋಳ, ಸಿ.ಯು. ಬೆಳ್ಳಕ್ಕಿ, ರಾಜೇಂದ್ರ ಸಾವಳಗಿ, ಬಿ.ಕೆ. ಹೊಂಗಲ, ರಾಮಚಂದ್ರ ಧೋಂಗಡೆ, ಎಚ್.ಡಿ. ನದಾ್, ಇತರರು ಇದ್ದರು.
ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಡಾ. ಜಿನದತ್ತ ಹಡಗಲಿ ವಂದಿಸಿದರು.